Saturday, August 13, 2022

Latest Posts

ಇಂದು ರಾತ್ರಿ ಪ್ರಧಾನಿ ಮೋದಿ ಭಾಷಣ: ಲಾಕ್‌ಡೌನ್ ವಿಸ್ತರಣೆಗೆ ಕೆಲ ರಾಜ್ಯಗಳ ಮೊರೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ಮೂರನೆ ಅವಧಿಯ ಲಾಕ್‌ಡೌನ್ ಗುಡವು ಸಮೀಪಿಸಿದ್ದು ಇಂದು ರಾತ್ರಿ ಮೋದಿ ಮಾಡುವ ಭಾಷಣ ಮಹತ್ವಪೂರ್ಣದ್ದಾಗಿದೆ. ಸೋಮವಾರವಷ್ಟೆ ಪ್ರಧಾನಿ, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಮಾವೇಶದ ಮೂಲಕ ಆಯಾ ರಾಜ್ಯಗಳ ಕೋವಿಡ್ ಸ್ಥಿತಿಗತಿಯನ್ನು ಕಲೆ ಹಾಕಿದ್ದಾರೆ.

ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಲಾಕ್‌ಡೌನ್ ಮತ್ತಷ್ಟು ದಿನಗಳ ಕಾಲ ವಿಸ್ತರಿಸುವಂತೆ ಈ ರಾಜ್ಯಗಳ ಮುಖ್ಯಮಂತ್ರಿಗಳು ಕೋರಿದ್ದಾರೆ. ಅಲ್ಲದೆ, ಕೆಲವೊಂದು ಮಹಾನಗರಗಳಿಗೆ ವಿಶೇಷ ರೈಲುಗಳ ಮೂಲಕ ಜನತೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯುವುದರಿಂದ ಸೋಂಕು ಉಲ್ಬಣಿಸುತ್ತೆ ಎಂದು ಮುಖ್ಯಮಂತ್ರಿಗಳಾದ ಕೆಸಿ ಆರ್ ಹಾಗೂ ಪಳನಿಸ್ವಾಮಿ ಪ್ರಧಾನಿ ಅವರ ಗಮನ ಸಳೆದಿದ್ದಾರೆ.

ಲಾಕ್‌ಡೌನ್ ವಿಸ್ತರಣೆಯಿಂದ ದೇಶದಲ್ಲಿ ಕೂಲಿ, ಕಾರ್ಮಿಕರ ಸಮಸ್ಯೆಗಳೂ ಹೆಚ್ಚಾಗಿದ್ದು ಇದರತ್ತ ಕೂಡಾ ಪ್ರಧಾನಿ ಗಮನ ಹರಿಸಲು ಕೆಲ ರಾಜ್ಯಗಳು ಮನವಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss