ಇಂದು ರಾತ್ರಿ ಮಂಗಳೂರಿಗೆ ಆಗಮಿಸಲಿದೆ ಕತಾರ್‌ನಿಂದ ‘ಖಾಲಿ’ ವಿಮಾನ!?

0
812

ಮಂಗಳೂರು: ವಂದೇ ಭಾರತ್ ಮಿಷನ್‌ನಲ್ಲಿ ಕತಾರ್ ದೋಹಾದಿಂದ ಮೂರನೇ ವಿಮಾನ ಶುಕ್ರವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ವಿಶೇಷವೆಂದರೆ ಈ ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಹೊರತುಪಡಿಸಿ ಬೇರೆ ಯಾವುದೇ ಪ್ರಯಾಣಿಕರು ಇರುವುದಿಲ್ಲ.
ಕತಾರ್ ದೋಹಾದಿಂದ ಸ್ವದೇಶಕ್ಕೆ ಆಗಮಿಸಿದ ಈ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಂಗಳೂರು ಮೂಲದವರಾಗಿದ್ದು ಎಲ್ಲಾ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಇಳಿದಿರುವುದರಿಂದ ವಿಮಾನ ಮಂಗಳೂರಿಗೆ ಪ್ರಯಾಣಿಕರಿಲ್ಲದೆಯೇ ಆಗಮಿಸುತ್ತಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here