ಬೆಂಗಳೂರು: ಕರ್ನಾಟಕದ ಮೇರು ನಟ, ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರಿಗೆ ಇಂದು 92ನೇ ಹುಟ್ಟು ಹಬ್ಬ.
ಕರ್ನಾಟಕದಲ್ಲಿ ಕನ್ನಡಿಗರ ನೋವು ನಲಿವಿಗೆ ಸ್ಪಂದಿಸುವ ಮಹಾನುಭಾವ ಡಾ. ರಾಜ್. ಕನ್ನಡ ಚಿತ್ರರಂಗಕ್ಕೆ ಡಾ.ರಾಜಕುಮಾರ್ ಅವರ ಕೊಡುಗೆ ಅಪಾರ. ಕನ್ನಡಿಗರಿಗೆ ತಮ್ಮ ಚಿತ್ರಗಳ ಮೂಲಕ ಮನರಂಜನೆ ಹಾಗೂ ಜನರಿಗೆ ಮೌಲ್ಯಗಳನ್ನು ತಿಳಿಸಿರುವ ವರನಟ ರಾಜ್ ಗೆ ಇಂದು ಏ.24ರಂದು 92 ನೇ ಹುಟ್ಟು ಹಬ್ಬ. ರಾಜ್ಯದ್ಯಂತ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಪ್ರತೀ ವರ್ಷ ಡಾ. ರಾಜ್ ಹುಟ್ಟುಹಬ್ಬವನ್ನು ಸಂಭ್ರಮಿಸುವ ಅಭಿಮಾನಿಗಳಿಗೆ ಈ ಭಾರಿ ಕೊರೋನಾ ಚಿಂತೆಗೀಡು ಮಾಡಿದೆ. ರಾಜ್ಯದಲ್ಲಿ ಕೊರೋನಾ ಲಾಕ್ ಡೌನ್ ಇರುವ ಕಾರಣ ಯಾವುದೇ ಕಾರ್ಯಕ್ರಮಗಳು ಮಾಡಬಾರದೆಂದು ಸರ್ಕಾರ ಆದೇಶಿಸಿರುವುದರಿಂದ ಎಲ್ಲರು ತಮ್ಮ ಮನೆಗಳಲ್ಲಿಯೇ ಆಚರಿಸುತ್ತಿದ್ದಾರೆ.
ಡಾ. ರಾಜ್ ಕುಮಾರ್ ಹುಟ್ಟು ಹಬ್ಬದ ಸಂಭ್ರಮವನ್ನು ಮನೆಯಲ್ಲಿಯೇ ಆಚರಿಸುವಂತೆ ಕೋರಿದ ಪುನೀತ್ ರಾಜ್ ಕುಮಾರ್ ಇಂದು ಮದ್ಯಾಹ್ನ 12:30ಕ್ಕೆ ಇನ್ಸ್ ಟಾಗ್ರಾಂ ನಲ್ಲಿ ಲೈವ್ ಬರುವುದಾಗಿ ತಿಳಿಸಿದ್ದಾರೆ.