ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ: ಅನ್ ಲಾಕ್ 2.0 ವಿಶ್ಲೇಷಣೆ

0
158

ಹೊಸದಿಲ್ಲಿ: ದೇಶದಲ್ಲಿ ಚೀನಾ ಭಾರತ ಸಂಘರ್ಷದ ಸಂದರ್ಭದಲ್ಲಿ ಭಾರತದಲ್ಲಿ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿದ ಬಳಿಕ ಇಂದು(ಮಂಗಳವಾರ) ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ದೇಶದಲ್ಲಿ ಅನ್ ಲಾಕ್ 2.0 ಪ್ರಾರಂಭವಾಗಲಿದ್ದು, ಈಗಾಗಲೇ 2.0 ಕುರಿತಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಹಿನ್ನಲೆ ಇಂದು ಪ್ರಧಾನಿ ಮೋದಿ ಇಂದು ಸಂಜೆ ಭಾಷಣ ಮಾಡಲಿದ್ದಾರೆ ಎಂದು ಪಿಎಂಒ ಆಫೀಸ್ ಖಚಿತಪಡಿಸಿದೆ.

ಜುಲೈ 31ರವರೆಗೆ ಅನ್ ಲಾಕ್ 2.0 ಜಾರಿಯಲ್ಲಿರಲಿದ್ದು, ಈ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಅನ್ ಲಾಕ್ 2.0 ಏನಿರುತ್ತೆ? ಏನೇನು ಇರುವುದಿಲ್ಲ? ಶಾಲಾ ಕಾಲೇಜು,ಮೆಟ್ರೋ ರೈಲು, ಸಿನಿಮಾ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್, ಎಂಟರ್ ಟೈನ್ ಮೆಂಟ್ ಪಾರ್ಕ್, ಬಾರ್, ಸಭಾ ಭವನಗಳು, ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.

ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ರದ್ದು ಮಾಡಿದ್ದು, ಗೃಹ ಇಲಾಖೆಯಿಂದ ಅನುಮತಿ ಪಡೆದರೆ ಮಾತ್ರ ವಿದೇಶ ಪ್ರಯಾಣಕ್ಕೆ ಅವಕಾಶ.

ದೇಶದಲ್ಲಿ ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

LEAVE A REPLY

Please enter your comment!
Please enter your name here