ಇಂದು RBIನಿಂದ ಬೆಳಗ್ಗೆ 10ಕ್ಕೆ ಸುದ್ದಿಗೋಷ್ಠಿ: ಶಕ್ತಿಕಾಂತ್ ದಾಸ್

0
102

ಹೊಸದಿಲ್ಲಿ: ಕೋವಿಡ್-19 ಕುರಿತಾಗಿ ಇಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾದ ಬಳಿಕ 2ನೇ ಬಾರಿಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಾ.27ರಂದು ಮೊದಲ ಸುದ್ದಿಗೋಷ್ಠಿ ನಡೆಸಿದ್ದು, ಜನರಿಗೆ 3ತಿಂಗಳು (ಮಾ.1ರಿಂದ- ಮೇ.31ರವರೆಗೆ) ಬ್ಯಾಂಕ್ ಗಳ EMI ಮುಂದೂಡಿದ್ದರು.
ಇಂದು ಏ.17ರಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದು, ದೇಶದ ಆರ್ಥಿಕತೆಗೆ ಸಹಾಯವಾಗುವಂತಹ ಕ್ರಮಗಳನ್ನು ಕೈಗೊಳ್ಳಬಹುದು, ದೇಶದ Non-Banking Financial Institutionಗಳಿಗೂ 3 ತಿಂಗಳ EMI ಮುಂದೂಡಬಹುದೆಂಬ ನಿರೀಕ್ಷೆಯಲ್ಲಿದೆ.

LEAVE A REPLY

Please enter your comment!
Please enter your name here