Monday, August 8, 2022

Latest Posts

ಇಒಎಸ್-01 ಉಪಗ್ರಹ ನಭೋಮಂಡಲಕ್ಕೆ ಹಾರಲು ಕೌಂಟ್ ಡೌನ್ ಶುರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶ್ರೀಹರಿ ಕೋಟಾದಿಂದ ಆಗಸಕ್ಕೆ ಜಿಗಿಯಲು ರಾಡಾರ್ ಇಮೇಜಿಂಗ್ ಇಒಎಸ್-01 ಸಹಿತ 10 ಉಪಗ್ರಹ ಹೊಂದಿರುವ ರಾಕೆಟ್ ಸಜ್ಜಾಗಿದ್ದು, ಕೌಂಟ್ ಡೌನ್ ಶುರುವಾಗಿದೆ.
ಮೊದಲನೇ ಲಾಂಚ್ ಪ್ಯಾಡ್ನಿಂದ ಅಪರಾಹ್ನ 3.02 ಗಂಟೆಗೆ ಈ ರಾಕೆಟ್ ಉಡಾವಣೆಯಾಗಲಿದೆ. ಈ ಉಡಾವಣೆ ಮೂಲಕ ಇಸ್ರೋ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ದಾಖಲೆ ನಿರ್ಮಿಸಲಿದೆ. ಇಂದು ಭಾರತದ ಉಪಗ್ರಹದ ಹೊರತಾಗಿ, ಲಿಥುವಾನಿಯಾ (1-ಟೆಕ್ನಾಲಜಿ ಡೆಮಾನ್ಸ್ಟ್ರೇಟರ್), ಲಕ್ಸಂಬರ್ಗ್ ( ಕ್ಲಿಯೋಸ್ ಸ್ಪೇಸ್ನಿಂದ 4 ಮಾರ್ಟೈಮ್ ಅಪ್ಲಿಕೇಶನ್ ಸ್ಯಾಟಲೈಟ್ಸ್ ), ಅಮೆರಿಕದ 4 ಲೆಮುರ್ ಮಲ್ಟಿ ಮಿಷನ್ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸೇರಿ 9 ಇತರೆ ಉಪಗ್ರಹಗಳು ಪಿಎಸ್ಎಲ್ವಿ-ಸಿ49 ಮೂಲಕ ಉಡಾವಣೆಯಾಗಲಿವೆ.
ಏನಿದು ಇಒಎಸ್-01?
ಇಒಎಸ್-01 ಉಪಗ್ರಹದಲ್ಲಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಇದ್ದು, ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳೂ ಇದರಲ್ಲಿ ದಾಖಲಾಗಲಿವೆ. ಭದ್ರತೆ, ಸುರಕ್ಷತೆಯ ದೃಷ್ಟಯಿಂದ ನಿಗಾ ಇರಿಸುವುದಕ್ಕೆ ಇದನ್ನು ಉಪಯೋಗಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss