Thursday, June 30, 2022

Latest Posts

ಇಟಲಿ, ಫ್ರಾನ್ಸ್ನಲ್ಲಿ ನಿಲ್ಲದ ಮರಣಮೃದಂಗ: ಅಮೆರಿಕದಲ್ಲಿ 7 ಲಕ್ಷ ದಾಟಿದ ಕೊರೋನಾ ಸೋಂಕು

ವಾಷಿಂಗ್‌ಟನ್ : ಅಮೆರಿಕದಲ್ಲಿ ಕೊರೋನಾ ಮರಣಮೃದಂಗ ಮುಂದುವರಿದಿದೆ. ಸೋಂಕು ಪೀಡಿತರ ಸಂಖ್ಯೆ ಏಳು ಲಕ್ಷ ದಾಟಿದೆ. ಶುಕ್ರವಾರದ ಅರ್ಧರಾತ್ರಿ ವೇಳೆಗೆ ಇಲ್ಲಿನ ಪೀಡಿತರ ಸಂಖ್ಯೆ 7,06309. ಮೃತರ ಸಂಖ್ಯೆ 36,607. ಸೋಂಕಿನಿಂದ ಚೇತರಿಸಿಕೊಂಡವರು ಸುಮಾರು 57 ಸಾವಿರ ಮಂದಿ. ಕಳೆದ 24 ತಾಸುಗಳಲ್ಲಿ ಮೃತಪಟ್ಟವರ ಸಂಖ್ಯೆ 3856.

ಕೊರೋನಾ ಸಾವಿನ ಸಂಖ್ಯೆಯಲ್ಲಿ ಅಮೆರಿಕ ನಂತರ ಎರಡನೆ ಸ್ಥಾನದಲ್ಲಿರುವ ಇಟಲಿಯಲ್ಲಿ ಇದುವರೆಗೆ 1,72434 ಮಂದಿಗೆ ಸೋಂಕು ಹರಡಿದ್ದು 22, 745 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ತಾಸುಗಳಲ್ಲಿ ಈ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 687. ಫ್ರಾನ್ಸ್ನಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 761 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss