Thursday, August 18, 2022

Latest Posts

ಇಡೀ ಜಗತ್ತಿನಲ್ಲಿ ಕೊರೋನಾ ಸೋಂಕು ಹರಡಿರುವಾಗ ರಾಮಮಂದಿರ ಶಿಲಾನ್ಯಾಸ ಬೇಕಿತ್ತಾ: ಮಾಜಿ ಸ್ಪೀಕರ್ ರಮೇಶ ಪ್ರಶ್ನೆ

ಬೆಳಗಾವಿ : ಇಡೀ ಜಗತ್ತಿನಲ್ಲಿ ಕೊರೋನಾ ಸೋಂಕು ದಟ್ಟವಾಗಿ ಹರಡಿದೆ. ಹೀಗಿರುವಾಗ ರಾಮಮಂದಿರ ಶಿಲಾನ್ಯಾಸ ಮಾಡಲು ಹೊರಟ್ಟಿದ್ದಿರಿ. ಆ ರಾಮನೇ ನಿಮ್ಮನ್ನು ಕಾಪಾಡಬೇಕೆಂದು ಮಾಜಿ ಸ್ಪೀಕರ್ ರಮೇಶ ಕುಮಾರ ಪರೋಕ್ಷವಾಗಿ ಬಿಜೆಪಿಯವರಿಗೆ ಟಾಂಗ್ ನೀಡಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಿರುಪತಿ ತಿಮ್ಮಪ್ಪನ ದೇಗುಲ ಬಾಗಿಲು ಮುಚ್ಚಿದವರು ನಾವು. ದೇಶ ಸೇರಿದಂತೆ ವಿಶ್ವದಲ್ಲಿ ಕೊರೋನಾ ಸೋಂಕು ದಟ್ಟವಾಗಿ ವ್ಯಾಪಿಸಿದೆ. ಈ ಸಂದರ್ಭದಲ್ಲಿ ಯಾವುದೇ ಸಮಾವೇಶ, ಸಭೆ, ಧಾರ್ಮಿಕ ಕೆಲಸಗಳು ನಡೆಯುವಂತಿಲ್ಲ ಎಂದು ಹೇಳಿ ಎಲ್ಲರಿಗೂ ನಿರ್ಬಂಧ ಹಾಕಿದ್ದರು. ಇಡೀ ದೇಶದ ಜವಾಬ್ದಾರಿ ಹೊತ್ತಿದ್ದವರು ಬಿಜೆಪಿಯವರು ಅವರು ದೊಡ್ಡವರು ಯೋಚನೆ ಮಾಡಬೇಕು ಶ್ರೀರಾಮನ ಶಿಲಾನ್ಯಾಸ ಮಾಡಲು ಹೊರಟ್ಟಿದ್ದಾರೆ ಅವರಿಗೆ ಆ ರಾಮನೇ ಕಾಪಾಡಬೇಕೆಂದು ಎಂದರು.
ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅನಾರೋಗ್ಯಕ್ಕೆ ಒಳಗಾದಾಗ ಆರೋಪ ಮಾಡುವುದು ಸದಾಚಾರ ಅಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಕೊರೋನಾ ಸೋಂಕು ತಗುಲಿದೆ. ಅವರಿಬ್ಬರೂಈ ಶೀಘ್ರದಲ್ಲಿಯೇ ಆರೋಗ್ಯವಾಗಿ ಬರಲಿ ಎಂದು ಹಾರೈಸುತ್ತೇನೆ ಎಂದರು.
ಕೊರೋನಾ ವೈರಸ್ ಆರಂಭದಲ್ಲಿ ವಿಧಾನ ಮಂಡಲದ ಅಧಿವೇಶನವನ್ನು ಮುಂದಕ್ಕೆ ಹಾಕಲಾಗಿದೆ. ವಿಪತ್ತು ಬಂದ ಸಂದರ್ಭದಲ್ಲಿ ನಾವು ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ನಾವು ಸರಕಾರಕ್ಕೆ ಸಹಕಾರ ನೀಡಿದ್ದೇವೆ. ಆದರೆ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸರ್ಕಾರ ಕೊರೋನಾ ವಿಚಾರದಲ್ಲಿ ಹಣ ಖರ್ಚು ಮಾಡುವಲ್ಲಿ ಯಡವಿದೆ. ಈ ಕುರಿತು ಸರ್ಕಾರಕ್ಕೆ ವಿಪಕ್ಷ ನಾಯಕರು ಎಚ್ಚರಿಕೆ ನೀಡಿದರು. ಹಣದ ದುರುಪಯೋಗ ಆಗಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಇಬ್ಬರು ಸಚಿವರು ಉತ್ತರ ನೀಡಿದರು ಎಂದರು.
ಈ ಕುರಿತಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ೨೦ ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದಾರೆ. ಆರೋಪಗಳಿಗೆ ದಾಖಲೆ ಒದಗಿಸಿ ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಲಾಗಿದೆ. ಇದಕ್ಕೆ ಸಂಪುಟದ ಐದು ಜನ ಸಚಿವರು ಪ್ರತ್ಯಾರೋಪ ಮಾಡಿದರು. ಪ್ರಜಾಪ್ರಭುತ್ವದಲ್ಲಿ ವಿಪಕ್ಷ ವಾಚ್ ಡಾಗ್ ಆಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ರಮೇಶ ಕುಮಾರ ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!