Wednesday, June 29, 2022

Latest Posts

ಇಡೀ ವಿಶ್ವವನ್ನು ವ್ಯಾಪಿಸುತ್ತಿರುವ ಕೊರೋನಾ ವೈರಸ್‌ಗೆ ಲಸಿಕೆ ಸನ್ನಿಹಿತ?

ಜೆರುಸಲೇಂ: ಇಡೀ ವಿಶ್ವವನ್ನು ವ್ಯಾಪಿಸುತ್ತಿರುವ ಕೊರೋನಾ ವೈರಸ್‌ಗೆ ಲಸಿಕೆಯೊಂದನ್ನು ಕಂಡುಹಿಡಿಯುವ ಸಾಧ್ಯತೆ ಉಜ್ವಲಗೊಂಡಿದೆ. ಇಸ್ರೇಲ್ ವಿಜ್ಞಾನಿಗಳು ಶೀಘ್ರದಲ್ಲೇ ಈ ಲಸಿಕೆಯನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ಇಸ್ರೇಲಿನ ಜೈವಿಕ ಸಂಶೋಧನಾ ಕೇಂದ್ರದಲ್ಲಿ ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲಾಗಿದೆ. ಆ ಮೂಲಕ ಮಹತ್ವದ ಬೆಳವಣಿಗೆ ಸಾಧಿಸಲಾಗಿದೆ ಎಂದು ಇಸ್ರೇಲಿ ಸರಕಾರ ಹೇಳಿಕೊಂಡಿದೆ. ಆದರೆ ಈ ಲಸಿಕೆಯನ್ನು ಮಾನವರಿಗೆ ಪ್ರಯೋಗಿಸುವ ಮುನ್ನ ಪ್ರಾಣಿಗಳಿಗೆ ಪ್ರಯೋಗಿಸುವ ಹಾಗೂ ಇನ್ನಿತರ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಾಗಿದೆ. ಇದಕ್ಕೆ ಕೆಲವು ತಿಂಗಳು ಬೇಕಾಗಬಹುದು ಎಂದು ಹೇಳಲಾಗಿದೆ.

ಸಾವಿಗೀಡಾಗಿದ್ದಾರೆ 4500 ಮಂದಿ: ಆದರೆ ಕೊರೋನಾ ವೈರಸ್ ಜಗತ್ತಿನಲ್ಲಿ ಉಂಟು ಮಾಡಿರುವ ತೀವ್ರ ಆತಂಕದ ಹಿನ್ನೆಲೆಯಲ್ಲಿ  ಕೆಲವು ಪ್ರಾಥಮಿಕ ಪ್ರಕ್ರಿಯೆಗಳನ್ನು ಕೈಬಿಟ್ಟು ನೇರವಾಗಿ ಮಾನವರ ಮೇಲೆಯೇ ಈ ಲಸಿಕೆಯನ್ನು ಪ್ರಯೋಗಿಸುವ ಕುರಿತಂತೆಯೂ  ಆಲೋಚಿಸಲಾಗುತ್ತಿದೆ ಎಂದೆನ್ನಲಾಗಿದೆ. ಈಗಾಗಲೇ ಜಗತ್ತಿನ ನೂರಕ್ಕೂ ಅಧಿಕ ದೇಶಗಳಲ್ಲಿ ಕೊರೋನಾ ವೈರಸ್ ವ್ಯಾಪಿಸಿದ್ದು 4500 ಮಂದಿ ಸಾವಿಗೀಡಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss