Sunday, August 14, 2022

Latest Posts

ಇಡುಕ್ಕಿ ಭೂಕುಸಿತ: ಮತ್ತೆ 6 ಮಂದಿ ಕಾರ್ಮಿಕರ ಮೃತದೇಹ ಪತ್ತೆ, ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆ

ಇಡುಕ್ಕಿ: ನಾಲ್ಕು ದಿನಗಳ ಹಿಂದೆ ಮುನ್ನಾರ್‌ನ ಸಮೀಪದ ರಾಜಮಲೆಯಲ್ಲಿ ಸಂಭವಿಸಿದ ಭೂಕುಸಿತದ ಬಳಿಕ ನಾಪತ್ತೆಯಾದವರಲ್ಲಿ ಮತ್ತೆ 6 ಮಂದಿ ಕಾರ್ಮಿಕರ ಮೃತದೇಹವನ್ನು ಸೋಮವಾರ ಮಣ್ಣಿನ ಅಡಿಯಿಂದ ಹೊರ ತೆಗೆದಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. 22ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ.
ಪೆಟ್ಟಿಮುಡಿ ತೊರೆ ಪೆರಿಯಾರ್ ನದಿಯ ಉಪ ನದಿಯಾದ ಮುಥಿರಪುಯ ನದಿಗೆ ಸೇರುತ್ತದೆ. ಇದ್ದರಿಂದ ನೀರಿನೊಂದಿಗೆ ಅವಶೇಷಗಳು ಕೊಚ್ಚಿಕೊಂಡು ಸಾಧ್ಯತೆಗಳಿವೆ ಎಂದು ರಕ್ಷಣಾ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದಾರೆ.
ಮುನ್ನಾರ್ ನಿಂದ 25 ಕಿ.ಮೀ.ದೂರದಲ್ಲಿರುವ ರಾಜಾಮಲೈ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಸುಮಾರು 80 ಜನ ಈ ಪ್ರದೇಶದಲ್ಲಿ ವಾಸವಿದ್ದರು ಎನ್ನಲಾಗಿದೆ. ಸದ್ಯ 49 ಮಂದಿಯ ಮೃತದೇಹ ಸಿಕ್ಕಿದ್ದು ಇನ್ನು 22 ಮಂದಿ ನಾಪತ್ತೆಯಾಗಿದ್ದಾರೆ. ಈ ಸಂಬಂಧ ರಕ್ಷಣಾ ಸಿಬ್ಬಂದಿ ನಿರಂತರಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss