Monday, September 28, 2020
Monday, September 28, 2020

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಇತಿಹಾಸದ ಪುಟಗಳಲಿ ಸ್ವರ್ಣಾಕ್ಷರದಿ ಬರೆವ ಸಾಹಸ ಮೆರೆದಿದ್ದಾರೆ 170ಕ್ಕೂ ಹೆಚ್ಚು ಮಂದಿಯ ಪ್ರಾಣ ಉಳಿಸಿದ ದಿಟ್ಟ ಪೈಲಟ್ ಕ್ಯಾ.ದೀಪಕ್

ಮುಂಬೈ: ಭಾರತೀಯ ವಾಯುಪಡೆಯ ಮತ್ತು ಏರ್‌ಇಂಡಿಯಾದ ದಿಟ್ಟ ಪೈಟ್‌ಗಳ ಚರಿತ್ರೆಯ ಪುಟಗಳಲ್ಲಿ ಸ್ವರ್ಣಾಕ್ಷರಗಳ ಬರೆಯಬೇಕಾದ ಹೆಸರು ಕ್ಯಾ.ದೀಪಕ್ ಸಾಥೆ ಅವರದು. ಶುಕ್ರವಾರ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದ ವಿಮಾನದಲ್ಲಿದ್ದ 190 ಪ್ರಯಾಣಿಕರ ಪೈಕಿ 170 ಕ್ಕೂ ಹೆಚ್ಚು ಮಂದಿಯ ಪ್ರಾಣ ಉಳಿದದ್ದೇ ದಿಟ್ಟ ಪೈಲಟ್ ಕ್ಯಾ.ದೀಪಕ್ ಅವರ ಅಸಾಮಾನ್ಯ ಧೈರ್ಯ ಸಾಹಸಗಳಿಂದ ಎಂಬುದನ್ನು ನೂರು ಬಾರಿ ಹೇಳಿದರೂ ಸಾಲದು. ರಾಷ್ಟ್ರಪ್ರೇಮಿಗಳು ಎಂದಿಗೂ ಮರೆಯದಂತಹ ಸಾಹಸ ಮೆರೆದಿದ್ದಾರೆ ಮಾಜಿ ಬ್ರಿಗೇಡಿಯರ್ ವಸಂತ ಸಾಥೆ ಅವರ ಹೆಮ್ಮೆಯ ಪುತ್ರ ಕ್ಯಾ.ದೀಪಕ್‌ಸಾಥೆ.
ಎನ್‌ಡಿಎಯಲ್ಲಿ ಟಾಪರ್ ಖ್ಯಾತಿಯ ಕ್ಯಾ.ದೀಪಕ್ ಸಾಥೆ ವಾಯುಪಡೆಯ ಓರ್ವ ಅತ್ಯುತ್ತಮ ಪೈಲಟ್ ಎಂದೇ ಗುರುತಿಸಲ್ಪಟ್ಟವರು. ನಿವೃತ್ತಿ ತರುವಾಯ ಕ್ಯಾ.ದೀಪಕ್ ಏರ್ ಇಂಡಿಯಾದ ಎ.320 ವಿಮಾನಕ್ಕೆ ಪೈಲಟ್ ಆಗಿ ಕರ್ತವ್ಯದಲ್ಲಿದ್ದರು. ಮೊನ್ನೆ ದುಬೈಯಿಂದ ಹೊರಟಿದ್ದ, ಕ್ಯಾ.ದೀಪಕ್ ಚಲಾಯಿಸುತ್ತಿದ್ದ ಏರ್‌ಇಂಡಿಯಾ ವಿಮಾನದ ಲ್ಯಾಂಡಿಂಗ್ ಗೇರ್ ಕಲ್ಲಿಕೋಟೆ ತಲಪುವ ಮುನ್ನವೇ ಕೆಟ್ಟುಹೋಗಿತ್ತು. ಲ್ಯಾಂಡಿಂಗ್ ಗೇರ್ ಓಪನ್ ಆಗ್ತಿಲ್ಲ ಎಂದು ದೃಢವಾಗುತ್ತಲೇ ಕ್ಯಾ.ದೀಪಕ್ ತಮ್ಮೆಲ್ಲ ಕೌಶಲ, ಅನುಭವಗಳನ್ನು ಬಳಸಿಕೊಂಡು ವಿಮಾನವನ್ನು ನಿಲ್ದಾಣದ 50ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಸುತ್ತು ಹಾರಾಡಿಸುವ ಮೂಲಕ ಪೆಟ್ರೋಲ್ ಟ್ಯಾಂಕ್ ಖಾಲಿ ಮಾಡಿದ್ದರು. ಪರಿಣಾಮ, ವಿಮಾನದ ಮುಂಭಾಗ ಮತ್ತು ಬಾಲದ ಭಾಗ ತುಂಡಾದರೂ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳಲಿಲ್ಲ. ವಿಮಾನದ ಲ್ಯಾಂಡ್ ಗೇರ್ ಬ್ಲಾಕ್ ಆದ ಸಂದರ್ಭ ವಿಮಾನವನ್ನು ಅದರ ತಳಭಾಗ ಅಥವಾ ಹೊಟ್ಟೆಯ ಭಾಗ ಭೂಮಿಗೆ ಮೊದಲು ಸ್ಪರ್ಶಿಸುವ ತೆರ ಇಳಿಸಬೇಕು. ಮೊನ್ನೆ ಕಲ್ಲಿಕೋಟೆ ಪರಿಸರದಲ್ಲಿ ವಿಪರೀತ ಗಾಳಿ ಮಳೆಯ ವಾತಾವರಣ. ನಿಲ್ದಾಣದಲ್ಲಿ ರನ್‌ವೇ ಎಲ್ಲೆಂದು ಕಾಣದಷ್ಟು ಮಳೆಯ ಆರ್ಭಟ.   ಟೇಬಲ್ ಟಾಪ್ ನಿಲ್ದಾಣ, ತೀರಾ ಸೊಟ್ಟಸೊಟ್ಟಗಾದ ರನ್‌ವೇ ಸಂಪೂರ್ಣ ಮಳೆನೀರಲ್ಲಿ ಮುಳುಗಿತ್ತು. ಆದರೂ ಧೃತಿಗೆಡದ ಕ್ಯಾ.ದೀಪಕ್ ತನ್ನೆಲ್ಲ ಬಲ ಪ್ರಯೋಗಿಸಿ ವಿಮಾನವನ್ನು ಅತಿ ಸಾಹಸದಿಂದ ನಿಲ್ದಾಣಕ್ಕಿಳಿಸಿಬಿಟ್ಟರು. ಭೂಮಿ ಸ್ಪರ್ಷಕ್ಕೆ ಮುನ್ನವೇ ವಿಮಾನ ಚೂರು ಚೂರಾಗಲಿದೆ ಎಂದು ಪೈಲಟ್‌ಗೆ ಗೊತ್ತಿತ್ತು. ಆದರೂ ವಿಮಾನ ಭೂಸ್ಪರ್ಷವಾಗೋ ಹಂತದಲ್ಲಿ ಇಂಜಿನ್ ಆಫ್ ಮಾಡಿಬಿಟ್ಟರು. ಕ್ಯಾ.ದೀಪಕ್ ತಜ್ಞತೆಯಿಂದಾಗಿ ವಿಮಾನ ಸಿಡಿದು ಚೂರಾಗಲಿಲ್ಲ. ಬದಲಾಗಿ ಪೈಲಟ್ ಕುಳಿತುಕೊಳ್ಳೋ ಮುಂಭಾಗ ಮತ್ತು ವಿಮಾನದ ಬಾಲದ ಭಾಗ ಮಾತ್ರ ಸಿಡಿಯಿತು. ನಡುಭಾಗ ಸುರಕ್ಷಿತವಾಗಿ ಉಳಿಯಿತು. ಪ್ರಯಾಣಿಕರ ಜೀವ ಉಳಿಯಿತು. ಈ ಎಲ್ಲಾ ಜೀವ ಉಳಿದದ್ದು ಒಂದೇ ಒಂದು ಕಾರಣದಿಂದ. ಅದು ಕ್ಯಾ.ದೀಪಕ್ ಅವರ ಸಾಹಸದಿಂದ, ಅವರ ತ್ಯಾಗದಿಂದ. ದೀಪಕ್ ಇಂದು ನಮ್ಮೊಂದಿಗಿಲ್ಲ. ಆದರೆ ಈ ದಿಟ್ಟ ಪೈಲಟ್‌ನ ಸಾಹಸಗಾಥೆ ಮಾತ್ರ ಇತಿಹಾಸದ ಪುಟ ಸೇರುವಂತದ್ದು ಖಂಡಿತ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

Don't Miss

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...
error: Content is protected !!