ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಇಥಿಯೋಪಿಯಾದಲ್ಲಿ ಶನಿವಾರ ರಾತ್ರಿ ಬಸ್ ಒಂದರ ಮೇಲೆ ಉಗ್ರರು ದಾಳಿ ಮಾಡಲಾಗಿದ್ದು 34 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆನಿಶಾಂಗುಲ್ ಗುಮುಜ್ ಪ್ರದೇಶದಲ್ಲಿ ಈ ಭೀಕರ ದಾಳಿ ನಡೆದಿದ್ದು ಈಗಾಗಲೇ 34 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಮಾಹಿತಿ ನೀಡಿದೆ.
ಸೆಪ್ಟಂಬರ್ ನಲ್ಲಿ 45 ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದರು ಎಂದು ಸರ್ಕಾರ ತಿಳಿಸಿದೆ.