ಚೆನ್ನೈ: ‘ಬಾಲು ಸರ್ … ನೀವು ಅನೇಕ ವರ್ಷಗಳಿಂದ ನನ್ನ ಧ್ವನಿಯಾಗಿದ್ದೀರಿ … ನಿಮ್ಮ ಧ್ವನಿ ಮತ್ತು ನಿಮ್ಮ ನೆನಪುಗಳು ನನ್ನೊಂದಿಗೆ ಶಾಶ್ವತವಾಗಿ ಉಳಿಯಲಿದೆ … ನಾನು ನಿನ್ನನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ ..”
#RIP Balu sir … you have been my voice for many years … your voice and your memories will live with me forever … I will truly miss you … pic.twitter.com/oeHgH6F6i4
— Rajinikanth (@rajinikanth) September 25, 2020
ಹೀಗೆಂದುಈ ಕುರಿತು ಟ್ವಿಟ್ಟರ್ನಲ್ಲಿ ವಿಡಿಯೋ ಹಂಚಿಕೊಂಡಿರುವ ತಲೈವಾ ರಜನಿಕಾಂತ್, ಇದು ಕರಾಳ ದಿನ, ಕೊನೆಯವರೆಗೂ ಬದುಕಿಗಾಗಿ ಹೋರಾಡಿ ಎಸ್ಪಿಬಿ ಅವರು ನಮ್ಮನ್ನಗಲಿ ಹೊರಟಿದ್ದಾರೆ. ಎಸ್ಪಿಬಿ ಅವರ ಹಾಡುಗಳು ಹಾಗೂ ಅವರ ಧ್ವನಿಯನ್ನು ರಂಜಿಸದ ಭಾರತೀಯರು ಬಹುಶಃ ಇರಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿತ್ವದಿಂದ ಗೆದ್ದವರು, ಸಣ್ಣವರು, ದೊಡ್ಡವರು ಎಂಬ ಭೇದಭಾವ ಇಲ್ಲದೇ ಎಲ್ಲರನ್ನೂ ಸಮಾನರೂಪದಲ್ಲಿ ಕಂಡ ಮಹಾನ್ ವ್ಯಕ್ತಿ, ಅವರ ಹಾಡು, ಅವರ ಧ್ವನಿಯನ್ನು ಮೀರಿದ ವ್ಯಕ್ತಿತ್ವದ ಅವರದ್ದು. ಅವರನ್ನು ಹತ್ತಿರದಿಂದ ಬಲ್ಲವರಿಗೆ ಅದು ತಿಳಿದಿರುತ್ತದೆ. ಸಣ್ಣವರು, ದೊಡ್ಡವರು ಎಂಬ ಭೇದಭಾವ ಇಲ್ಲದೇ ಎಲ್ಲರನ್ನೂ ಸಮಾನರೂಪದಲ್ಲಿ ಕಂಡ ಮಹಾನ್ ವ್ಯಕ್ತಿ ಎಂದು ನೆನಪಿಸಿಕೊಂಡಿದ್ದಾರೆ ತಲೈವಾ.