Saturday, August 13, 2022

Latest Posts

ಇದು ಖಾದರ್ ಕಾಲವಲ್ಲ: ತಿರುಗೇಟು ನೀಡಿದ ಸಚಿವ ಕೋಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ಬಿ.ರೂಪೇಶ್ ಇದೀಗ ವರ್ಗಾವಣೆಗೊಂಡಿದ್ದು, ಸಿಂಧೂ ಬಿ.ರೂಪೇಶ್ ಅವರಿಗೆ  ಕೊಲೆ ಬೆದರಿಕೆ ಒಡ್ಡಿದವರನ್ನು‌ ಶಿಕ್ಷಿಸುವ ಬದಲು ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ ಎಂದು ಟ್ವೀಟ್ ಮಾಡಿದ್ದ ಶಾಸಕ ಯು.ಟಿ.ಖಾದರ್ ಅವರ ಹೇಳಿಕೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ತಿರುಗೇಟು ನೀಡಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಯು.ಟಿ.ಖಾದರ್ ಕಾಲದಲ್ಲಿ ಪೊಲೀಸರಿಗೆ ಬೆದರಿಕೆ, ಹಲ್ಲೆ, ಗೂಂಢಾಗಿರಿ ನಡೆಸುವಂತದ್ದು ಯಥೇಚ್ಛವಾಗಿ ನಡೆಯುತ್ತಿತ್ತು. ಇದೀಗ ಖಾದರ್ ಕಾಲವಲ್ಲ ಎಂಬುದನ್ನು ಖಾದರ್ ಅವರು ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು  ಸಚಿವ ಕೋಟ  ತಿರುಗೇಟು ನೀಡಿದ್ದಾರೆ.

ಕಾಲ ಕಾಲಕ್ಕೆ ರಾಜ್ಯ ಸರ್ಕಾರ ಮಾಡುವಂತಹ ಸ್ವಾಭಾವಿಕ ವರ್ಗಾವಣೆಯಡಿಯಲ್ಲಿ ದ.ಕ.ಜಿಲ್ಲಾಧಿಕಾರಿಯವರ ವರ್ಗಾವಣೆ ನಡೆದಿದೆ. ಅದಕ್ಕೆ ರಾಜಕೀಯ ಲೇಪನ ಬಳಸಿ ಶಾಸಕ ಯು.ಟಿ.ಖಾದರ್ ಅವರು ಈ ಅಧಿಕಾರಿಯವರ ವರ್ಗಾವಣೆಯ ಹಿಂದೆ ರಾಜಕಾರಣ ಇದೆ ಎಂಬಂತಹ ಆಪಾದನೆ ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಯವರಿಗೆ ಬೆದರಿಕೆ ಒಡ್ಡಿರುವವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.

ಈ ಮೂಲಕ‌ ನಾನು ಸ್ಪಷ್ಟ ಪಡಿಸುವುದೇನೆಂದರೆ ಯು.ಟಿ.ಖಾದರ್ ತಮ್ಮ ಮಾತನ್ನು ವಾಪಸ್ ಪಡೆದುಕೊಳ್ಳಬೇಕು. ಸ್ವಾಭಾವಿಕವಾಗಿ ಕಾಲಕಾಲಕ್ಕೆ ರಾಜ್ಯ ಸರಕಾರ ಯಾವ ರೀತಿಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೋ ಅದೇ ರೀತಿ ದ.ಕ.ಜಿಲ್ಲಾಧಿಕಾರಿಯವರ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಅವರಿಗೆ ಯಾರು ಕೊಲೆ ಬೆದರಿಕೆ ಒಡ್ಡಿದ್ದಾರೋ ಅವರ ಮೇಲೆ ಈಗಾಗಲೇ ನಮ್ಮ ಗೃಹ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss