ಬೆಂಗಳೂರು: ಕಾಂಗ್ರೆಸ್ನವರು ಅವಿಶ್ವಾಸ ಮಂಡಿಸಿರುವುದರಿಂದ ಮತ್ತೆ ನನಗೆ ಆರು ತಿಂಗಳ ವಿಶ್ವಾಸ ಸಿಗಲಿದೆ, ಇದೇ ರೀತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ಮಂಡಿಸುತ್ತಲೇ ಇರಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು, ಅದಕ್ಕೆ ಸಿಎಂ ಪ್ರತ್ಯುತ್ತರ ನೀಡಿದ್ದಾರೆ.
ಅವಿಶ್ವಾಸ ಮಂಡನೆ ಮೇಲೆ ಶನಿವಾರ ಚರ್ಚೆ ನಡೆಸಲು ಅವಕಾಶ ಕೊಡುವ ಸಾಧ್ಯತೆ ಇದೆ. ಜನರ ಗಮನ ಸೆಳೆಯಲು ಕಾಂಗ್ರೆಸ್ ಯಾವಾಗಲು ಏನಾದರೂ ಒಂದು ದಾರಿ ಹುಡುಕುತ್ತಲೇ ಇರುತ್ತದೆ ಎಂದು ಸಿಎಂ ಹೇಳಿದರು