ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದ ಇಂಡಿಯನ್ ಗ್ಯಾಸ್ ಗ್ರಾಹಕರು ಇನ್ಮುಂದೆ ಸುಲಭವಾಗಿ ಅಡುಗೆ ಅನಿಲ ಎಲ್ಪಿಜಿ ರೀಫಿಲ್ ಸಿಲಿಂಡರ್ ಕಾಯ್ದಿರಿಸಬಹುದು.
ಹೌದು, ಇನ್ನು ದೇಶದಲ್ಲಿ ಎಲ್ಲಿಯಾದರೂ ಗ್ರಾಹಕರು ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು ರೀಫಿಲ್ ಬುಕ್ಕಿಂಗ್ ಆಗುತ್ತೆ. ಗ್ರಾಹಕರು 8454955555 ನಂಬರ್ಗೆ ಮಿಸ್ಡ್ ಕಾಲ್ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ವ್ಯವಸ್ಥೆಯಿಂದ ಗ್ರಾಹಕರ ದೀರ್ಘಕಾಲದ ಕರೆಗಳ ಮೂಲಕ ತಮ್ಮ ಸಿಲಿಂಡರ್ ಕಾಯ್ದಿರಿಸುವ ತಾಪತ್ರೆ ಅಂತ್ಯವಾಗಲಿದೆ. ಇನ್ನು ಸಾಮಾನ್ಯ ಕರೆಯ ದರಗಳು ಅನ್ವಯವಾಗುವ ಐವಿಆರ್ಎಸ್ ಕರೆಗಳಿಗೆ ಹೋಲಿಸಿದರೆ ಯಾವುದೇ ಕರೆ ಶುಲ್ಕ ವಿಧಿಸಲಾಗುವುದಿಲ್ಲ. ಇದರ ಜೊತೆ ಐವಿಆರ್ಎಸ್ ಅಥವಾ ವೃದ್ಧಾಪ್ಯದ ಗ್ರಾಹಕರಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಈ ಸೌಲಭ್ಯವು ಸಾಕಷ್ಟು ನೆರವಾಗುತ್ತದೆ ಎಂದು ಹೇಳಿದೆ.
ಎಲ್ಪಿಜಿ ಗ್ರಾಹಕರಿಗೆ ಮಿಸ್ಡ್ ಕಾಲ್ ಸೌಲಭ್ಯ ಸೇವೆಗೆ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಾಲನೆ ನೀಡಿದರು.