ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಮಾಹಿತಿ ಆಯೋಗದ ಮುಖ್ಯಸ್ಥರಾಗಿ ಯಶವರ್ದನ್ ಕುಮಾರ್ ಸಿನ್ಹಾ ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಯಶವರ್ದನ್ ಕುಮಾರ್ ಸಿನ್ಹಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿನ್ಹಾ ಅವರು ಕಳೆದ ವರ್ಷ ಜನವರಿ 1ರಂದು ಕೇಂದ್ರ ಮಾಹಿತಿ ಆಯೋಗಕ್ಕೆ ಸೇರಿದ್ದರು.
ಸಿನ್ಹಾ ಅವರಿಗೆ 62 ವರ್ಷ ವಯಸ್ಸು. ಇನ್ನು 65 ವರ್ಷ ವಯಸ್ಸಾಗುವವರೆಗೂ ಅಧಿಕಾರದಲ್ಲಿ ಇರುತ್ತಾರೆ. ಅಂದರೆ ಇನ್ನು3 ವರ್ಷ ಅಧಿಕಾರದಲ್ಲಿ ಇರುತ್ತಾರೆ. ಕೇಂದ್ರ ಮಾಹಿತಿ ಆಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಕಾಂಗ್ರೆಸ್ ನಾಯಕ ಅದಿರ್ ರಂಜನ್ ಚೌಧರಿ, ಗೃಹ ಸಚಿವ ಅಮಿತ್ ಶಾ ಸದಸ್ಯರಾಗಿದ್ದಾರೆ.