Monday, July 4, 2022

Latest Posts

ಇನ್ನು ಮುಂದೆ ಕೇಕ್ ತರಲು ಬೇಕರಿಗೆ ಹೋಗುವ ಅವಶ್ಯಕತೆ ಇಲ್ಲ: ಮನೆಯಲ್ಲೇ ತಯಾರಿಸಿ ಬರ್ಥ್‌ಡೇ ಕೇಕ್..

ಲಾಕ್‌ಡೌನ್ ಸಮಯದಲ್ಲಿ ಯಾವುದಕ್ಕೂ ಎಕ್ಸೈಟ್‌ಮೆಂಟ್ ಇರಲಿಲ್ಲ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇವುಗಳ ಆಚರಣೆಗೆ ಹೊರಗೆ ಹೋಗುವುದು, ಸುತ್ತಾಡುವುದು, ಸ್ನೇಹಿತರ ಜೊತೆ ಸೇರುತ್ತಿದ್ದೆವು. ಇವುಗಳ ಕೇಂದ್ರಬಿಂದು ಕೇಕ್ ಹೌದು. ಕೇಕ್ ಇಲ್ಲದ ಬರ್ಥ್ ಡೇ ಇಮ್ಯಾಜಿನ್ ಮಾಡುವುದೂ ಅಸಾಧ್ಯ. ಈಗ ಯಾವ ಲಾಕ್‌ಡೌನ್ ಇಲ್ಲದಿದ್ದರೂ ಹೊರಗೆ ಹೋಗಿ ಕೇಕ್ ತರುವುದು ಸ್ವಲ್ಪ ರಿಸ್ಕಿಯೇ ಹೌದು. ಮನೆಯಲ್ಲಿ ಕೇಕ್ ತಯಾರಿಸುವುದು ಕಷ್ಟ ಎಂದುಕೊಂಡವರು ಮನೆಯಲ್ಲಿಯೇ ಕೇಕ್ ತಯಾರಿಸಿದ್ದಾರೆ. ಬರ್ಥ್ ಡೇ ಮಾಡಿದ್ದಾರೆ. ಮನೆಯಲ್ಲಿಯೇ ಬಿಸ್ಕೆಟ್ ಕೇಕ್ ಮಾಡಬಹುದು. ಅಥವಾ ನಾರ್ಮಲ್ ಎಗ್‌ಲೆಸ್ ಕೇಕ್ ಮಾಡಬಹುದು. ಹೇಗೆ ಅಂತಿರಾ ಇಲ್ಲಿದೆ ರೆಸಿಪಿ…

ಬೇಕಾಗಿರುವ ಸಾಮಾಗ್ರಿಗಳು

  • ಎರಡು ಪ್ಯಾಕ್ ಬಿಸ್ಕೆಟ್ ಅಥವಾ ಒಂದು ಕಾಲು ಕಪ್ ಮೈದಾ
  • ಒಂದು ಕಾಲು ಸ್ಪೂನ್ ಬೇಕಿಂಗ್ ಪೌಡರ್
  • ಅರ್ಧ ಸ್ಪೂನ್ ಬೇಕಿಂಗ್ ಸೋಡಾ
  • ಒಂದು ಪಿಂಚ್ ಸೋಡಾ
  • ಮುಕ್ಕಾಲು ಕಪ್ ಸಕ್ಕರೆ ( ಮೈದಾ ಹಾಕಿದರೆ ಮಾತ್ರ)
  • ಅರ್ಧ ಕಪ್ ಎಣ್ಣೆ ಅಥವಾ ಬೆಣ್ಣೆ
  • ಒಂದು ಕಪ್ ಹಾಲು
  • ಒಂದು ಕಾಲು ಕಪ್ ವಿನೇಗರ್
  • ಚಾಕಲೇಟ್
    ಮಾಡುವ ವಿಧಾನ
  • ಪಾತ್ರೆಗೆ ಎಣ್ಣೆ ಅಥವಾ ಬೆಣ್ಣೆ ತುಪ್ಪ ಯಾವುದಾದರೂ ಒಂದನ್ನು ಸವರಿ ಇಟ್ಟುಕೊಳ್ಳಿ
  • ಇನ್ನೊಂದು ಪಾತ್ರೆಗೆ ಪುಡಿ ಮಾಡಿದ ಬಿಸ್ಕೆಟ್ ಅಥವಾ ಮೈದಾ ಹಾಗೂ ಈ ಮೇಲೆ ಹೇಳಿರುವ ಎಲ್ಲ ಸಾಮಾಗ್ರಿಗಳನ್ನು ಹಾಕಿ ಮಿಕ್ಸ್ ಮಾಡಿ.
  • ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಗೆ ಹಾಕಿ
  • ಈಗಾಗಲೇ ಕುಕ್ಕರ್‌ಗೆ ಸ್ವಲ್ಪ ನೀರು ಹಾಕಿ ಅದರ ಮೇಲೆ ಒಂದು ರಿಂಗ್ ರೀತಿಯ ಪಾತ್ರೆಯನ್ನು ಇಡಿ. ಅದರ ಮೇಲೆ ಕೇಕ್ ಮಿಶ್ರಣದ ಬೌಲ್ ಇಟ್ಟು ಮುಚ್ಚಿ.
  • ಮೂವತ್ತರಿಂದ-ಮೂವತ್ತೈದು ನಿಮಿಷದ ನಂತರ ಕೇಕ್ ಬೆಂದಿದೆಯೇ ಒಮ್ಮೆ ಚೆಕ್ ಮಾಡಿ ಕೆಳಗಿಳಿಸಿ. ಈಗ ಬೇಕೆಂದರೆ ಅದನ್ನು ಮಧ್ಯದಲ್ಲಿ ಕತ್ತರಿಸಿ ಎರಡು ಲೇಯರ್ ಮಾಡಬಹುದು ಅಥವಾ ಹಾಗೇ ಬಿಡಬಹುದು.
  • ನಂತರ ಚಾಕೋಲೇಟ್ ಚಿಪ್‌ಗಳಿಂದ ಅದನ್ನು ಡೆಕೋರೇಟ್ ಮಾಡಬಹುದು. ಚಾಕಲೇಟ್ ಸಾಸ್ ಅಥವಾ ನಟೇಲಾ ಯಾವುದನ್ನಾದರೂ ಬಳಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss