ಹೊಸದಿಲ್ಲಿ: ಸೊಂಕಿನ ವಿರುದ್ಧ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಭಾರತದ ಮುಸ್ಲೀಮರಿಗೆ ಹಜ್ ಯಾತ್ರೆಗೆ ತೆರಳಲು ಸಮ್ಮತಿ ದೊರೆಯುವುದು ಬಹುತೇಕ ಅಸಂಭವವಾಗಿದ್ದು, ಸೌದಿ ಅರೇಬಿಯಾದಿಂದ ಖಚಿತ ಮಾಹಿತಿ ದೊರೆತ ಬಳಿಕ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಹಜ್ ಯಾತ್ರೆ ಪ್ರಾರಂಭವಾಗಲು ಮೂರು ವಾರಗಳು ಬಾಕಿಯಿದ್ದು, ಆದರೆ ಸೌದಿ ಹಜ್ ಪ್ರಾಧಿಕಾರ ಇನ್ನೂ ಭಾರತದ ಸಂಪರ್ಕಕ್ಕೆ ಬಾರದೇ ಇರುವುದರಿಂದ ಮುಂದಿನ ನಿರ್ಧಾರ ಕೈಗೊಳ್ಳ ಲಾಗಿಲ್ಲ. ಈಗಾಗಲೇ ಯಾತ್ರೆಗೆ ಎಲ್ಲ ಸಿದ್ಧರಾಗಿರು ವುದರಿಂದ ಸರ್ಕಾರದ ಮುಂದಿನ ನಿರ್ಧಾರ ಗಳಿಗೆ ಬದ್ಧರಾಗಿದ್ದೇವೆ ಎಂದು ಭಾರತೀಯ ಹಜ್ ಸಮಿತಿ ತಿಳಿಸಿದೆ. ಹಜ್ ಯಾತ್ರೆಗೆ ಸಮ್ಮತಿ ದೊರೆಯದೇ ಇದ್ದಲ್ಲಿ ನೋಂದಣಿ ಸಂದರ್ಭ ಪಾವತಿಸಲಾದ ಹಣ ವನ್ನು ಸಂಪೂರ್ಣ ಪಾವತಿ ಮಾಡಲಾಗುವುದು ಎಂದು ಹೇಳಿದೆ.