Wednesday, July 6, 2022

Latest Posts

ಇನ್ನೂ 50 ದಿನ ಮಂಗಳೂರಿಗೆ ಬೇಡ ಟೆನ್ಶನ್!

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಮುಂದಿನ 50 ದಿನಗಳಿಗೆ ಬೇಕಾಗುವಷ್ಟು ನೀರಿನ ಲಭ್ಯತೆ ಇದ್ದು ಈ ವರ್ಷ ನೀರಿನ ಕೊರತೆ ಬರುವುದಿಲ್ಲ ಮತ್ತು  ರೇಷನಿಂಗ್ ಮಾಡುವುದಿಲ್ಲ ಎಂದು ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ತಿಳಿಸಿದ್ದಾರೆ.

ಅವರು ಗುರುವಾರ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವರ್ಷ ಮಂಗಳೂರಿನ ಜನತೆಗೆ ನೀರಿನ ಅಭಾವ ಬರುವುದಿಲ್ಲ. ಕಳೆದ ವರ್ಷ ಈ ಸಮಯಕ್ಕೆ ರೇಷನಿಂಗ್ ವ್ಯವಸ್ಥೆಯ ಮೂಲಕ ಎರಡು ದಿನಕ್ಕೊಮ್ಮೆ ನೀರು ನೀಡಲಾಗುತ್ತಿತ್ತು. ಕೈಗಾರಿಕೆಗಳು ಬಂದ್ ಇದೆ, ಆದರೆ ಕೊರೋನಾ ಲಾಕ್‌ ಡೌನ್‌ ನಿಂದಾಗಿ ಜನರು ಮನೆಯಲ್ಲಿದ್ದು  ಹೆಚ್ಚು ನೀರನ್ನು ಬಳಸುತ್ತಾರೆ. ಆದರೂ ಈ ವರ್ಷ ನೀರಿನ ಅಭಾವ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಮನಪಾ ಆಯುಕ್ತ ಶಾಸನಾಡಿ ಅಜಿತ್ ಹೆಗ್ಡೆ ಮಾತನಾಡಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಕಳೆದ ವರ್ಷ ಮಾ. 13ಕ್ಕೆ ಎಎಂಆರ್ ಡ್ಯಾಂನಿಂದ ಸೆಕೆಂಡ್ ಫಿಲ್ಲಿಂಗ್ ಮಾಡಿದ್ದೇವು. ಈ ಬಾರಿ ಫಸ್ಟ್ ಫಿಲ್ಲಿಂಗನ್ನು ಮಾ.16ಕ್ಕೆ ಮಾಡಲಾಗಿದೆ. ಮುಂದಿನ ೫೦ ದಿವಸಕ್ಕೆ ಬೇಕಾಗುವಷ್ಟು ನೀರಿನ ಸಂಗ್ರಹ ತುಂಬೆ ಡ್ಯಾಂನಲ್ಲಿದೆ. ಕಳೆದ ವರ್ಷ ರೇಷನಿಂಗ್ ಮಾಡಲಾಗಿತ್ತು. ಈ ವರ್ಷ ರೇಷನಿಂಗ್ ಮಾಡುವ ಅಗತ್ಯ ಇಲ್ಲ . ಜೂನ್‌ಗಿಂತ ಮೊದಲು ಮಳೆ ಬಂದರೆ ಯಥೇಚ್ಛವಾಗಿ ನೀರು ಸಿಗಲಿದೆ. ನೀರಿನ ಲಭ್ಯತೆಯ ಬಗ್ಗೆ ಜನರಿಗೆ ಆತಂಕ ಬೇಡ ಎಂದರು.

ಈ ಸಂದರ್ಭ ಸಹಾಯಕ ಆಯುಕ್ತ ಸಂತೋಷ್ ಕುಮಾರ್, ಕಿರಿಯ ಎಂಜಿನಿಯರ್ ನರೇಶ್ ಶೆಣೈ, ಇಂಜಿನಿಯರ್‌ ಗಳಾದ ರವಿಶಂಕರ್, ರಿಚರ್ಡ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss