ಬೆಂಗಳೂರು: ವಿದೇಶಗಳಲ್ಲಿ ಸಿಲುಕಿರುವ 10 ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೇ 8ರ ಬಳಿಕ ರಾಜ್ಯಕ್ಕೆ ಮರಳಲಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ 6,100 ಮಂದಿ ಆಗಮಿಸುತ್ತಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಕ್ಕೆ ಇಳಿದ ತಕ್ಷಣ ಕ್ವಾರಂಟೈನ್ ಮುದ್ರೆ ಒತ್ತಲಾಗುವುದು. ಸ್ಥಳೀಯ ದೂರವಾಣಿ ಸಂಖ್ಯೆ ಸಿಮ್ಕಾರ್ಡ್ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಮಾ, ಸ್ಯಾನಿಟೈಸರ್ ಖರೀದಿಗೆ ಅಂಗಡಿಗಳ ವ್ಯವಸ್ಥೆ ಮಾಡಲಾಗುತ್ತದೆ. ವಿಮಾನ ನಿಲ್ದಾಣದಿಂದ ಇಳಿದು ಕ್ವಾರಂಟೈನ್ಗೆ ಹೋಗುವ ವೇಳೆಗೆ ಎಲ್ಲರ ಮೊಬೈಲ್ಗೂ ಆರೋಗ್ಯ ಸೇತು ಆಪ್ ಡೌನ್ ಮಾಡಿಕೊಳ್ಳಲು ಸೂಚಿಸಲಾಗುತ್ತದೆ ಎಂದು ಹೇಳಿದರು.
ಸೋಂಕಿನ ಲಕ್ಷಣಗಳು ಇರುವವರನ್ನು ಎ-ವರ್ಗ ಎಂದು ವಿಗಂಡಿಸಿ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಸೋಂಕು ಲಕ್ಷಣಗಳಿಲ್ಲದ ಹಿರಿಯ ನಾಗರಿಕರು, ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಬಿ-ವರ್ಗವಾಗಿ, ಸೋಂಕು ಲಕ್ಷಣಗಳಿಲ್ಲದವರನ್ನು ಸಿ-ವರ್ಗವಾಗಿ ವಿಂಗಡಿಸಿ ಸರ್ಕಾರದ ಕ್ವಾರೆಂಟೈನ್ಗೆ ಒಳಪಡಿಸಲಾಗುವುದು. ಬಿ ವರ್ಗದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಉಳಿದ 14 ದಿನ ನಿಗಾ ಅವಧಿ, ಸಿ ವರ್ಗದವರಿಗೆ 14 ದಿನ ಹೋಂ ಕ್ವಾರಂಟೈನ್ ಹಾಗೂ 14 ದಿನ ನಿಗಾ ಅವಧಿ ಎಂದು ಸೂಚಿಸಲಾಗಿದೆ.
ಪ್ರಮುಖ ದೇಶಗಳಲ್ಲಿರುವ ಕನ್ನಡಿಗರು
ಕೆನಡಾ: 328
ಯುಎಸ್ಎ: 927
ಯುಎಇ: 2,575
ಕತಾರ್: 414
ಸೌದಿ ಅರೇಬಿಯಾ: 927