Thursday, July 7, 2022

Latest Posts

ಇನ್ನೊಂದು ತಿಂಗಳೊಳಗೆ ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಶಾಸಕ ಮುರುಗೇಶ್ ನಿರಾಣಿ

ಮೈಸೂರು: ಮಂಡ್ಯ ಜಿಲ್ಲೆಯಲ್ಲಿರುವ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಇನ್ನೊಂದು ತಿಂಗಳೊಳಗೆ ಪುನಶ್ಚೇತನಗೊಳಿಸಿ, ಚಾಲನೆ ನೀಡಲಾಗುವುದು ಎಂದು ಉದ್ಯಮಿಯಾದ ಶಾಸಕ, ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಶನಿವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿoದ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಪಾಂಡವಪುರ ಸಕ್ಕರೆ ಕಾರ್ಖಾನೆ ತುಕ್ಕು ಹಿಡಿದಿದ್ದು, ಇನ್ನು ೩೦ ದಿನದಲ್ಲಿ ಅದನ್ನು ಚಾಲೂ ಮಾಡುತ್ತೇನೆ, ಇಲ್ಲಿಯವರೆಗೆ ಈ ಕಾರ್ಖಾನೆಯಲ್ಲಿ ಕೆಲಸ ಮಾಡಿರುವವರಿಗೆ ಬಾಕಿ ಕೊಡಬೇಕು ಎಂಬ ಕರಾರು ಇದೆ. ಕಾರ್ಖಾನೆ ಆರಂಭವಾದ ೨೪ ಗಂಟೆಯೊಳಗೆ ಉದ್ಯೋಗಿಗಳಿಗೆ ಬಾಕಿ ಹಣ ಪಾವತಿಸಲಾಗುವುದು. ೧೩೦ ಮಂದಿ ಉದ್ಯೋಗಿಗಳು ಇಚ್ಚಿಸಿದರೆ, ಕಾರ್ಖಾನೆಗೆ ಬಂದು ಮತ್ತು ಕೆಲಸ ಮಾಡಬಹುದು, ಇಲ್ಲದಿದ್ದರೆ, ಅವರು ಸೂಚಿಸಿದವರಿಗೆ ಕೆಲಸ ನೀಡಲಾಗುವುದು ಎಂದು ಹೇಳಿದರು.
ಮಂಡ್ಯ ಜಿಲ್ಲೆಗಿರುವ ಸಕ್ಕರೆ ನಾಡು ಎಂಬ ಹೆಗ್ಗಳಿಕೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ತೆಗೆದುಕೊಂಡು ಹೋಗುವುದು ನನ್ನ ಕನಸಾಗಿಸಾಗಿದ್ದು, ಈ ಭಾಗದ ಜನ ನನ್ನ ಮೇಲೆ ನಂಬಿಕೆಯಿಟ್ಟು, ಒಂದೇ ಧ್ವನಿಯಿಂದ ಒಗ್ಗಟ್ಟಾಗಿ ಸಹಕಾರ ನೀಡಿದರೆ, ಎರಡು ವರ್ಷಗಳ ನಂತರ ಬದಲಾವಣೆಗಳನ್ನು ಗಮನಿಸಬಹುದು ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಕಬ್ಬು ಇಲ್ಲಿನ ರೈತರ ಜೀವಾಳವಾಗಿದೆ. ರೈತರು ಬೆಳೆದ ಕಬ್ಬನ್ನು ಖರೀದಿಸಿ, ಕಾಲ ಕಾಲಕ್ಕೆ ಅವರಿಗೆ ಹಣ ಸಂದಾಯ ಮಾಡುವುದರ ಜೊತೆಗೆ ನಿರುದ್ಯೋಗ ಯುವಕ ಯುವತಿಯರಿಗೆ ತರಬೇತಿ ನೀಡಿ, ಉದ್ಯೋಗ ನೀಡುವುದು, ಆ ಮೂಲಕ ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಲಾಗಿದೆ.
ಕಬ್ಬು ಬೆಳೆಗಾರರಿಗೆ ವಿಮೆ ಮಾಡಿಸುವುದು ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು. ಸೂಪರ್ ಮಾರುಕಟ್ಟೆ ಸ್ಥಾಪಿಸುವ ಮೂಲಕ ರೈತರಿಗೆ ಹಾಗೂ ಕಾರ್ಮಿಕರಿಗೆ ಅಗ್ಗದ ದರದಲ್ಲಿ ಜೀವನ ಅವಶ್ಯಕ ವಸ್ತುಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀವಾಗಿ ತಮ್ಮದೇ ಆದ ಬ್ಯಾಂಕ್ನು÷್ನ ಸ್ಥಾಪಿಸಿ, ಕಬ್ಬು ಬೆಳೆಗಾರರಿಗೆ ಆರ್ಥಿಕ ಶಕ್ತಿ ತುಂಬುವುದು. ಗುಣಮಟ್ಟದ ಕಬ್ಬಿನ ಬೀಜಗಳು, ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ನೀಡುವುದು. ರೈತರಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಕಬ್ಬು ಬೆಳೆಯುವ ತರಬೇತಿ ನೀಡಲಾಗುವುದು. ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಏರ್ಪಡಿಸುವುದು, ಕೃಷಿ ಉತ್ಸವಗಳು, ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ರೈತರ ಆಶಾಕಿರಣವಾಗಿರುವ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಆಧುನಿಕ ತಂತ್ರಜ್ಞಾನದೊAದಿಗೆ ಅಭಿವೃದ್ಧಿಪಡಿಸಿ, ಮಾದರಿ ಸಕ್ಕರೆ ಕಾರ್ಖಾನೆಯಾಗಿ ಮಾಡುವ ವಾಗ್ದಾನ ನೀಡುತ್ತೇನೆ ಎಂದರು.
ಕೇವಲ ಸಕ್ಕರೆ ಉತ್ಪಾದನೆ ಮಾಡುವುದು ಅಷ್ಟೇ ಅಲ್ಲ, ವಿದ್ಯುತ್, ಇಥನಾಲ್, ರೆಕ್ಟಿಪೈಡ್ ಸ್ಫಿರಿಟ್, ಸಿಒ೨, ಸಿಎನ್ಜಿ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಹಲವಾರು ಉಪ ಉತ್ಪನ್ನಗಳನ್ನು ಉತ್ಪಾದಿಸಲಿದೆ. ಮುಧೋಳ ಸಕ್ಕರೆ ಕಾರ್ಖಾನೆಗಳಲ್ಲಿ ಜಾರಿಯಲಿರುವ ಎಲ್ಲಾ ರೈತ ಸ್ನೇಹಿ ಅನುಕೂಲಗಳನ್ನು ಹಾಗೂ ನಿಯಮಗಳನ್ನು ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿಯೂ ಅನುಷ್ಠಾನಗೊಳಿಸಲಾಗುವುದು. ಸಕ್ಕರೆ ಕಾರ್ಖಾನೆಯಲ್ಲಿ ವೃತ್ತಿಪರ ಅನುಭವವಿರುವ ನನಗೆ ಪಾಂಡವಪುರ ಸಕ್ಕರೆ ಕಾರ್ಖಾನೆ ದೊರೆತಿದ್ದು, ಅದರಿಂದ ಜಿಲ್ಲೆಗಾಗುವ ಅನುಕೂಲ ಏನು ಎಂಬುವುದು ಭವಿಷ್ಯದಲ್ಲಿ ನಿಮ್ಮ ಕಣ್ಣುಮುಂದೆ ಕಾಣಲಿದೆ ಎಂದರು.
ಮೈಶುಗರ್ ಸಕ್ಕರೆ ಕಾರ್ಖಾನೆ ನಮ್ಮ ತಾತನ ಮನೆ ಆಸ್ತಿಯಲ್ಲ. ಅದಕ್ಕೆ ಹರಾಜು ಪ್ರಕ್ರಿಯೆ ನಡೆದಿಲ್ಲ. ಪ್ರಕ್ರಿಯೆ ನಡೆದು ಬಿಡ್ ಕೂಗಿದಾಗ, ನನಗೆ ಸಾಮಾರ್ಥ್ಯ ಇದ್ದರೆ, ಆ ಕಾರ್ಖಾನೆಯನ್ನೂ ತೆಗೆದುಕೊಳ್ಳುತ್ತೇನೆ ಎಂದು ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss