ಮೈಸೂರು : ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿದರೆ ಬಿಜೆಪಿ ಸೇರಿದ 17 ಶಾಸಕರದ್ದು ನಾಯಿಪಾಡು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಯಾವ ನಾಯಿ ಎಂದು ಮೊದಲು ತಿಳಿಸಲಿ. ಜೆಡಿಎಸ್ ಪಕ್ಷದಿಂದ ಬಂದಾಗ ಯಾವ ನಾಯಿಯಾಗಿದ್ದರು. ಎಂದು ಹೇಳಲಿ, ಐದು ವರ್ಷ ಆಡಳಿತ ನಡೆಸಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ಮತಗಳ ಅಂತರದಿAದ ಸೋತು, ಬದಾಮಿಗೆ ಓಡಿ ಹೋಗಿರುವ ಸಿದ್ದರಾಮಯ್ಯ ಯಾವ ನಾಯಿ ಎಂದು ತಿಳಿಸಲಿ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷ ಸೋಲಿನ ಹತಾಶೆಯಿಂದ ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ
ಅನರ್ಹಗೊಂಡ ಶಾಸಕರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡಬಾರದು. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದನ್ನ ನಿಲ್ಲಿಸಲಿ, ಅವರು ಈಗ ಏನಾಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ, ಬೇರೆಯವರ ಬಗ್ಗೆ ಯಾಕೇ ಮಾತನಾಡಬೇಕು ಎಂದು ತಿರುಗೇಟು ನೀಡಿದರು.
ಶಿರಾ ಹಾಗೂ ಬೆಂಗಳೂರಿನ ಆರ್.ಆರ್.ನಗರದ ಉಪಚುನಾವಣೆಯಲ್ಲಿ ಬಿಜೆಪಿ ಜಯ ಭಾರಿಸಲಿದೆ, ಇದರಲ್ಲಿ ಯಾವುದೇ ಸಂಶಯವಿಲ್ಲ, ಇದರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ಯಡಿಯೂರಪ್ಪನವರಿಗೆ ಜನ ಬೆಂಬಲವಿದೆ ಎಂಬ ಮಾಹಿತಿ ರವಾನೆಯಾಗಲಿದೆ ಎಂದರು.
ಕನಕಪುರ ಬಂಡೆ, ಹುಲಿಯಾ ಎಂದೆಲ್ಲಾ ನಾವುಗಳೇ ಅಭಿಮಾನದಿಂದ ಹೇಳಿಕೊಳ್ಳುವುದೇ ವಿನಹ ಜನರು ಹೇಳುತ್ತಿರುವುದಿಲ್ಲ ಎಂದು ಲೇವಡಿ ಮಾಡಿದರು