ಬೆಂಗಳೂರು: ಇನ್ಫೋಸಿಸ್ ಪ್ರತಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬಗ್ಗೆ ವೆಬ್ ಸೀರಿಸ್ ನಲ್ಲಿ ಅವಹೇಳನಕಾರಿಯಾಗಿ ವಿಡಿಯೋ ಪೋಸ್ಟ್ ಮಾಡಿದ್ದ ಓಲ್ಡ್ ಟೌನ್ ಕ್ರಿಮಿನಲ್ಸ್ ವೆಬ್ ಸೀರಿಸ್ ನಿರ್ದೇಶಕ ಅಮರ್ ವಿಚಾರಣೆಗೆ ಹಾಜರಾಗುವಂತೆ ನಂದಿನಿ ಲೇಔಟ್ ಠಾಣಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವೆಬ್ ಸೀರಿಸ್ ನಲ್ಲಿ ಬರುವ ಸನ್ನಿವೇಶಗಳನ್ನು ತಿರುಚಿ ಸುಧಾಮೂರ್ತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋವೊಂದನ್ನು ಹರಿಬಿಟ್ಟಿದ್ದ ನಿರ್ದೇಶಕ ಅಮತ್ ಹಾಗೂ ನಿರೂಪಕ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಜಯರಾಜ್ ನಾಯ್ಡು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.