ನವದೆಹಲಿ: ಆಟೋಗಳನ್ನು ಗಂಟೆಗಟ್ಟಲೆ ಬಾಡಿಗೆಗೆ ಪಡೆಯುವ ಅವಕಾಶವನ್ನು ಊಬರ್ ಕಲ್ಪಿಸಿದೆ.
ಬೆಂಗಳೂರು ಸೇರಿದಂತೆ ಐದು ನಗರಗಳಲ್ಲಿ ಈ ಸೇವೆ ದೊರೆಯಲಿದೆ. ಹಲವಾರು ಕಡೆ ನಿಲ್ಲಿಸಿ, ಸರ್ವಿಸ್ ಪಡೆಯಬಹುದಾಗಿದೆ. ಭಾರತದಲ್ಲಿ ಊಬರ್ ಮೊದಲ ಬಾರಿಗೆ ಇದನ್ನು ಜಾರಿಗೆ ತಂದಿದೆ.
ಬೆಂಗಲೂರು, ದೆಹಲಿ, ಮುಂಬೈ,ಚೆನ್ನೈಹಾಗೂ ಹೈದರಾಬಾದ್ನಲ್ಲಿ ಸೇವೆ ಸಿಗಲಿದೆ. ಈ ಆಟೋ ಸೇವೆಯನ್ನು ಎಂಟು ಗಂಟೆಗಳ ಕಾಲ ಪಡೆಯಬಹುದಾಗಿದೆ. ಒಂದು ಗಂಟೆಗೆ ಅಥವಾ ಹತ್ತು ಕಿ.ಮೀಗೆ ೧೬೯ ರೂ ನೀಡಬೇಕಾಗಿದೆ. ಕಡಿಮೆ ದರದಲ್ಲಿ ಜನರನ್ನು ತಲುಪುವ ಊಬರ್ನ ಹೊಸ ಪ್ರಯತ್ನ ಇದಾಗಿದೆ.