Sunday, July 3, 2022

Latest Posts

ಇನ್ಮುಂದೆ ಸುಲಭವಾಗಿ ಸಿಗಲಿದೆ ಮರಳು: ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮರಳು ಗಣಿಗಾರಿಕೆ ಸಂಬಂಧ ನಿಯಮಗಳನ್ನು ಸರಳಗೊಳಿಸಿದ್ದೇವೆ. ಮರಳು ಸುಲಭವಾಗಿ ಸಿಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ನೂತನ ಗಣಿ ನೀತಿ ತರಲು ಚಿಂತನೆ ನಡೆಸಲಾಗಿದೆ. ಹಳ್ಳ, ಕೊಳ್ಳಗಳಲ್ಲಿ ಸಿಗುವ ಉಸುಕು ಬಳಕೆಗೆ ಅವಕಾಶ ಕಲ್ಪಿಸುವುದು, ಎತ್ತಿನಗಾಡಿ, ಟ್ರ್ಯಾಕ್ಟರ್​​ಗಳಲ್ಲಿ ತರಲು ಅವಕಾಶ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಕ್ಕಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ. ಈಗ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ವೈಜ್ಞಾನಿಕವಾಗಿ ಮರಳು ತೆಗೆಯುವ ಬಗ್ಗೆ ನೀತಿಯಲ್ಲಿರಲಿದೆ. ಎಷ್ಟು ಮರಳು ತೆಗೆಯಬಹುದು, ಮರಳು, ಮಣ್ಣು, ಗರಸು ಎಂದು ವಿಭಾಗಿಸುತ್ತೇವೆ. ಮರಳನ್ನ ಮಾತ್ರ ತೆಗೆಯಲು ಅವಕಾಶ ಸಿಗಲಿದೆ. ಈಗಾಗಲೇ ಒಂದು ಡ್ರಾಫ್ಟ್ ತಂದಿದ್ದೇವೆ. ಉ.ಕ, ಕರಾವಳಿಯಲ್ಲಿ ಒಂದೊಂದು ನೀತಿ ಇವೆ. ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಈ ನೀತಿ ತರುತ್ತಿದ್ದೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss