ಹೊಸದಿಗಂತ ವರದಿ, ಧಾರವಾಡ
ಜಿಪಂ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ಉಪನಗರ ಠಾಣೆ ತನಿಖಾಧಿಕಾರಿಯಾಗಿದ್ದ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನ.23ಕ್ಕೆ ಮುಂದೂಡಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ.
ಸಿಬಿಐ ಅಧಿಕಾರಿಗಳು ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ಕೇಳಿದ ಹಿನ್ನಲೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ.23ಕ್ಕೆ ಮುಂದೂಡಿದೆ. ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಟಿಂಗರಿಕರ್ ಜಾಮೀನು ಅರ್ಜಿಯುವ ವಜಾಗೊಂಡಿತ್ತು.
ಈ ಹಿನ್ನಲೆ ಇನ್ಸಕೆಪ್ಟರ್ ಚನ್ನಕೇಶ ಅವರು, ಜಾಮೀನು ಕೋರಿ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿಂದೆ ನ.11ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಒಂದು ವಾರಗಳ ಕಾಲ ವಿಚಾರಣೆ ಮುಂದೂಡಿತ್ತು. ಇದೀಗ ಸಿಬಿಐ ಮನವಿ ಮೇರೆಗೆ ಪುನಃ ನ.23ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.