Sunday, June 26, 2022

Latest Posts

ಇಬ್ಬರು ಮನೆಗಳ್ಳರ ಬಂಧನ : 5.62 ಲಕ್ಷ ಮೌಲ್ಯದ 124 ಗ್ರಾಂ ಚಿನ್ನ ವಶಕ್ಕೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 5.62 ಲಕ್ಷ ರೂ. ಮೌಲ್ಯದ 124 ಗ್ರಾಂ ಬಂಗಾರದ ಒಡವೆಗಳನ್ನು ವಶಪಡಿಸಿಕೂಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಐನಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವರ ಮನೆಯ ಬೀಗ ಹೊಡೆದು ಬೀರುವಿನಲ್ಲಿಟ್ಟಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ ಬಂಗಾರದ ಆಭರಣಗಳು. 70 ಸಾವಿರ ರೂ. ಹಣ ಕಳವು ಮಾಡಲಾಗಿತ್ತು ಎಂದರು.
ಜಗಳೂರು ತಾಲ್ಲೂಕಿನ ಪಲ್ಲಾಘಟ್ಟ ಗ್ರಾಮದ ಆರೋಪಿ ಸನಾವುಲ್ಲಾ ಎಂಬುವನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಇತರೆ ಆರೋಪಿಗಳ ಮಾಹಿತಿ ಸಿಕ್ಕಿದೆ. ಪಾಲಯ್ಯ, ಸುಬಾನ್‌ಸಾಬ್ ಮತ್ತು ದಾದೂ ಸೇರಿದಂತೆ ನಾಲ್ಕು ಜನರು ವಿವಿಧ ಕಡೆ ಮನೆಕಳ್ಳತನ, ದೇವಸ್ಥಾನಗಳ ಹುಂಡಿಗಳ ಕಳವು ಮಾಡಿರುವ ಬಗ್ಗೆ ಸನಾವುಲ್ಲಾ ಒಪ್ಪಿಕೊಂಡಿದ್ದಾನೆ. ಇದಕ್ಕೆ ಆರೋಪಿ ಸನಾವುಲ್ಲಾ ಹೆಂಡತಿ ಹಸೀನಾಬಿ ಸಹಕಾರ ನೀಡಿರುವುದು ತಿಳಿದುಬಂದಿದೆ ಎಂದು ತಿಳಿಸಿದರು.
ಚಿತ್ರದುರ್ಗ ಗ್ರಾಮಾಂತರ, ತುರುವನೂರು ಹಾಗೂ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಈತನಿಂದ ಹಣ ಹಾಗೂ ಬಂಗಾರದ ಒಡವೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸನಾವುಲ್ಲಾ ಮತ್ತು ಅವನ ತಂಡ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ನಾಲ್ಕು, ಹಾವೇರಿ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾನಿಂಗ ಬಿ. ನಂದಗಾವಿ, ಉಪವಿಭಾಗದ ಉಪಾಧೀಕ್ಷಕ ಪಾಂಡುರಂಗ, ಚಿತ್ರದುರ್ಗ ಗ್ರಾಮಾಂತರ ವೃತ್ತದ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ್, ಗ್ರಾಮಾಂತರ ಠಾಣೆ ಪಿ.ಎಸ್.ಐ.ಗಳಾದ ಮಹೇಶ್‌ಗೌಡ, ಯಶೋಧಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss