ಜನರಿಗೆ ಕೊರೋನಾ ಭಯ ಆರಂಭವಾದಾಗಿಂದ ತಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದಾರೆ. ಯಾರಾದರೂ ಇದನ್ನು ತಿಂದರೆ, ಕುಡಿದರೆ ಕೊರೋನಾ ಬರುವುದಿಲ್ಲ ಎಂದರೆ ಸಾಕು ಅದನ್ನೇ ಬಳಸುತ್ತಾರೆ. ಇದರಲ್ಲಿ ಕಷಾಯ, ಚೂರ್ಣ ಹೀಗೆ ಎಲ್ಲವನ್ನೂ ತಿಂದಾಗಿದೆ. ಇದೀಗ ವಿಟಮಿನ್ ಸಿ ಹಾಗೂ ಜಿಂಕ್ ಹಾಗೂ ಮಾತ್ರೆ ಕುಡಿಯುವ ಅಭ್ಯಾಸ. ಆದರೆ ಇದರಿಂದ ನಮ್ಮ ದೇಹಕ್ಕೆ ತುಂಬಾನೆ ಲಾಭಗಳಿವೆ. ಇದು ಕೇವಲ ವಿಟಮಿನ್ ಮಾತ್ರೆಗಳನ್ನು ಮಾತ್ರ ಖರೀಸಿಬೇಕು ಎಂದೇನಿಲ್ಲ. ನ್ಯಾಚುರಲ್ ಆಗಿ ಸಿಗುವ ವಿಟಮಿನ್ ಸಿಗಳನ್ನು ಹೇರಳವಾಗಿ ಸೇವಿಸಿ. ವಿಟಮಿನ್ ಸಿ ಮಾತ್ರೆ ಅಥವಾ ಸಪ್ಲಿಮೆಂಟ್ಗಳನ್ನು ಬಳಸಿದರೆ ಏನು ಲಾಭ ಇಲ್ಲಿ ನೋಡಿ..
- ಕ್ರೋನಿಕ್ ಡಿಸೀಸ್: ರೋಗನಿರೋಧಕ ಶಕ್ತಿ ಒಳಗಿಂದ ಹೆಚ್ಚಲು ವಿಟಮಿನ್ ಸಿ ಅವಶ್ಯ. ದೇಹಕ್ಕೆ ಬರುವ ಕೆಟ್ಟ ಅಂಶಗಳಿಂದ ದೇಹದ ಒಳ್ಳೆ ಸೆಲ್ಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಫ್ರೀ ರ್ಯಾಡಿಕಲ್ಸ್ ದೇಹಕ್ಕೆ ಹೊಕ್ಕರೆ ಕ್ರೋನಿಕ್ ಡಿಸೀಸ್ ಬರುತ್ತದೆ. ವಿಟಮಿನ್ ಸಿ ಮಾತ್ರೆ ಅಥವಾ ಸಪ್ಲಿಮೆಂಟ್ ಸೇವನೆಯಿಂದ ಬ್ಲಡ್ ನ ಆಂಟಿಆಕ್ಸಿಡೆಂಡ್ ಲೆವೆಲ್ ಹೆಚ್ಚುತ್ತದೆ.
- ಬಿಪಿ ಸಮಸ್ಯೆ ಇಲ್ಲ: ಹೈಬಿಪಿ ಇರುವವರಿಗೂ ವಿಟಮಿನ್ ಸಿ ಮಾತ್ರೆಯಿಂದ ಲಾಭವಿದೆ. ಕೇವಲ ಹೈ ಬಿಪಿ ಅಷ್ಟೇ ಅಲ್ಲ, ನಾರ್ಮಲ್ ಇರುವವರೂ ಕೂಡ ಈ ಮಾತ್ರೆ ಸೇವಿಸಬಹುದು. ಬ್ಲಡ್ ವೆಸಲ್ಗಳು ರಿಲ್ಯಾಕ್ಸ್ ಆಗಲು ವಿಟಮಿನ್ ಸಿ ಸಹಕರಿಸುತ್ತದೆ. ಇದರಿಂದ ನಿಮ್ಮ ಬಿಪಿ ನಾರ್ಮಲ್ ಆಗಿಯೇ ಇರುತ್ತದೆ.
- ಹೃದಯ ಸಂಬಂಧಿ ಕಾಯಿಲೆ: ಹಾರ್ಟ್ ಅಟ್ಯಾಕ್, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಇಡುತ್ತದೆ. ದೇಹದಲ್ಲಿ ಹಾರ್ಟ್ ಅಟ್ಯಾಕ್ಗೆ ಕಾರಣ ಆಗುವ ಕೆಟ್ಟ ಕೊಲೆಸ್ಟ್ರಾಲ್ನ್ನು ನಿಯಂತ್ರಿಸಲು ಈ ಮಾತ್ರೆಗಳು ಸಹಕರಿಸುತ್ತದೆ.
- ಕಬ್ಬಿಣಾಂಶದ ಕೊರತೆ ಇಲ್ಲ: ದೇಹದ ಎಲ್ಲ ಫಂಕ್ಷನ್ಗಳೂ ಸರಿಯಾಗಿ ಆಗಬೇಕಿದ್ದರೆ ಅದಕ್ಕೆ ಕಬ್ಬಿಣಾಂಶವೂ ಮುಖ್ಯ. ಕೆಂಪು ರಕ್ತ ಕಣಗಳು ಹಾಗೂ ಹಾಗೂ ರಕ್ತದಲ್ಲಿ ಆಮ್ಲಜನಕ ಸಪ್ಲೇ ಆಗಲು ಇವು ಸಹಕರಿಸುತ್ತದೆ.ಕಬ್ಬಿಣಾಂಶದ ಕೊರತೆಯಿಂದಾಗುವ ಅನಿಮೀಯಾ ದಂಥ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ.
- ಇಮ್ಯುನಿಟಿ ಹೆಚ್ಚುತ್ತದೆ: ದೇಹದ ಒಳಗೆ ಪ್ರವೇಶಿಸುವ ಹಾರ್ಮಫುಲ್ ವೈರಾಣುಗಳಿಂದ ದೇಹ ರಕ್ಷಿಸುವ ಕಾರ್ಯ ಇದು ಮಾಡುತ್ತದೆ. ವಿಟಮಿನ್ ಸಿನಿಂದ ಚರ್ಮವೂ ಕೂಡ ಡಿಫೆನಸೀವ್ ಆಗಿ ಕೆಲಸ ಮಾಡುತ್ತದೆ. ವಿಟಮಿನ್ ಸಿ ಬಳಸುವುದರಿಂದ ಗಾಯಗಳು ಕೂಡ ಬೇಗ ಮಾಯುತ್ತದೆ.