Saturday, August 13, 2022

Latest Posts

ಇಮ್ಯೂನಿಟಿ ಹೆಚ್ಚಿಸುವ ಸೂಪರ್ ಕಷಾಯ..  ಹೀಗೆ ಮಾಡಿ

ಇತ್ತೀಚೆಗೆ ಕೊರೋನಾ ಮೂಲೆ ಮೂಲೆಯಲ್ಲೂ ಹರಡುತ್ತಿದೆ. ಪ್ರತಿ ಊರಿನಲ್ಲಿಯೂ ಬರುತ್ತಿದೆ. ನಮ್ಮ ಬಗ್ಗೆ ನಾವೇ ಜಾಗೃತಿ ತೆಗೆದುಕೊಂಡು ಕೊರೋನಾದಿಂದ ದೂರವಿರಲು ಪ್ರಯತ್ನಿಸಬೇಕು.  ಇಮ್ಮೂನಿಟಿ ಹೆಚ್ಚಿಸುವ ಆಹಾರಗಳನ್ನು  ಸೇವಿಸಬೇಕು. ಇಮ್ಯೂನಿಟಿ ಹೆಚ್ಚಿಸಲು ಇಲ್ಲೊಂದು ಕಷಾಯವಿದೆ. ಇದನ್ನು ನಿತ್ಯ ಕುಡದರೆ ಇಮ್ಯೂನಿಟಿ ಹೆಚ್ಚುತ್ತದೆ. ಕಷಾಯವನ್ನು ಹೀಗೆ ಮಾಡಿ.

ಬೇಕಾಗುವ ಪದಾರ್ಥ

ಅಮೃತ ಬಳ್ಳಿ

ನೆಲನೆಲ್ಲಿ

ಹಾಲುಬಳ್ಳಿ ಬೇರು

ಶುಂಠಿ

ಜೇನುತುಪ್ಪ

ಕಾಳುಮೆಣಸು

ಬೆಲ್ಲ

ಹಾಲು

 ಮಾಡುವ ವಿಧಾನ:
ಅಮೃತ ಬಳ್ಳಿ, ನೆಲನೆಲ್ಲಿ, ಹಾಲಬಳ್ಳಿ ಬೇರು ಕಾಳುಮೆಣಸು, ಶುಂಠಿ ಇವಿಷ್ಟನ್ನು ಬಿಸಿಲಿನಲ್ಲಿ ಒಣಗಿಸಿಕೊಂಡು ಪುಡಿ ಮಾಡಿಟ್ಟುಕೊಳ್ಳಿ. ದಿನವೂ ಬೆಳಿಗ್ಗೆ ತಿಂಡಿಗೂ ಮೊದಲು ಎರಡು ಕಪ್ ನೀರಿಗೆ  ಒಂದು ಚಮಚ ಈ ಪುಡಿಯನ್ನು ಹಾಕಿ ಕುದಿಸಿ. ಎರಡು ಕಪ್ ನೀರು ಒಂದು ಕಪ್ ಆಗುವವರೆಗೂ ಕುದಿಸಿ. ಆ ನಂತರ ಅದಕ್ಕೆ ಬೆಲ್ಲ , ಒಂದು ಚಮಚ ಜೇನುತುಪ್ಪ ಮತ್ತು ಹಾಲನ್ನು ಹಾಕಿಕೊಂಡು ಕುಡಿಯಬೇಕು. ಇದನ್ನು ನಿತ್ಯ ಕುಡಿದರೆ ಇಮ್ಯೂನಿಟಿ ಹೆಚ್ಚುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss