ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇರಾನ್-ಇರಾಕ್ ಪ್ರಯಾಣ ಮುಂದೂಡಿ: ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ

ಹೊಸದಿಲ್ಲಿ: ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಯಾವ ಕ್ಷಣದಲ್ಲಾದರೂ ಯುದ್ಧ ಸಂಭವಿಸುವ ಸಾಧ್ಯತೆ ಇದ್ದು, ಇರಾನ್ ಮತ್ತು ಇರಾಕ್ ನಲ್ಲಿರುವ ಭಾರತೀಯರು ಎಚ್ಚರಕೆಯಿಂದಿರಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೇಮನಿ ಹತ್ಯೆಗೆ ಅಮೆರಿಕದ ವಿರುದ್ಧ ದ್ವೇಷಕ್ಕೆ ಮುಂದಾಗಿರುವ ಇರಾನ್ ಇಂದು ಇರಾಕ್ ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಹೀಗಾಗಿ ಈ ಎರಡು ದೇಶಗಳ ನಡುವೆ ಯಾವ ಕ್ಷಣದಲ್ಲಾದರೂ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇರಾಕ್ ಮತ್ತು ಇರಾನ್ ನಲ್ಲಿರುವ ಭಾರತೀಯರು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ, ಇರಾಕ್ ದೇಶಕ್ಕೆ ತೆರಳಬೇಕೆಂದಿರುವ ಭಾರತೀಯ ಪ್ರವಾಸಿಗರು ಸದ್ಯ ತಮ್ಮ ಪ್ರವಾಸ ಮುಂದೂಡುವುದು ಉತ್ತಮ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಇರಾಕ್ ನಲ್ಲಿರುವ ಅಮೆರಿಕ ವಾಯನೆಲೆಗಳ ಮೇಲೆ ಇಂದು ಮತ್ತೊಮ್ಮೆ ಇರಾನ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಇರಾಕ್, ಇರಾನ್ ಮತ್ತು ಅಮೆರಿಕಕ್ಕೆ ಅಗತ್ಯವಾಗಿ ಹೋಗುವ ಸಂದರ್ಭವಿದ್ದರೆ ಬಹಳ ಜಾಗೃತಿಯಿಂದ ಇರಬೇಕೆಂದು ಭಾರತೀಯರಿಗೆ ಎಚ್ಚರಿಕೆ ನೀಡಲಾಗಿದೆ.

ಡಿಜಿಸಿಎ (ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಕೂಡ ಭಾರತದ ಏರ್​ಲೈನ್ಸ್​ಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss