ತೆಹ್ರಾನ್ (ಇರಾನ್): ವೈದ್ಯಕೀಯ ಕೇಂದ್ರದಲ್ಲಿ ಅನಿಲ ಸ್ಪೋಟಗೊಂಡ ಘಟನೆ ಇರಾನ್ ನ ತೆಹ್ರಾನ್ ನಲ್ಲಿ ಸಂಭವಿಸಿದ್ದು, 19 ಜನ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ 15 ಪುರುಷರು, 4 ಮಂದಿ ಮಹಿಳೆಯರು ಮೃತಪಟ್ಟಿರುವುದಾಗಿ ಅಗ್ನಿ ಶಾಮಕ ಇಲಾಖೆ ವಕ್ತಾರ ಜಲಾಲ್ ಮಲೇಕಿ ತಿಳಿಸಿದ್ದಾರೆ.
ವೈದ್ಯಕೀಯ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ಕ್ಸಿಜನ್ ಟ್ಯಾಂಕ್ ಗಳು ಸೋರಿಕೆಯಿಂದ ಅಗ್ನಿ ಸ್ಪೋಟ ಸಂಭವಿಸಿದೆ.