Saturday, July 2, 2022

Latest Posts

ಇಲಿ ನಿಯಂತ್ರಣಕ್ಕಾಗಿ ಪಪ್ಪಾಯಿ ಹಣ್ಣಿನಲ್ಲಿಟ್ಟ ಪಾಷಾಣ ತಿಂದು ಮಹಿಳೆ ಮೃತ!

ಉಡುಪಿ: ಕ್ಯಾಶೂ ಫ್ಯಾಕ್ಟರಿಯಲ್ಲಿ ಇಲಿಗಳ ನಿಯಂತ್ರಣಕ್ಕಾಗಿ ಪಪ್ಪಾಯಿ ಹಣ್ಣಿನಲ್ಲಿಟ್ಟ ಇಲಿ ಪಾಷಾಣ ತಿಂದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಉಡುಪಿ ತಾಲೂಕಿನ ಕುದಿ ಗ್ರಾಮದ ದೇವರಗುಂಡ ನಿವಾಸಿ ಶ್ರೀಮತಿ (43) ಮೃತ ಮಹಿಳೆ.

ಇವರ ಮನೆಯ ಹಿಂಭಾಗದಲ್ಲಿ ಕ್ಯಾಶೂ ಫ್ಯಾಕ್ಟರಿ ನಡೆಸುತ್ತಿದ್ದು, ಇಲಿಗಳ ಹಾವಳಿ ಜಾಸ್ತಿ ಇದ್ದುದರಿಂದ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಷಾಣವನ್ನು ಹಾಕಿ ಇಡಲಾಗಿತ್ತು. ಶ್ರೀಮತಿ ಅವರು ಕಣ್ತಪ್ಪಿನಿಂದ ಅ.‌ 19ರಂದು ಆ ಹಣ್ಣನ್ನು ತಿಂದಿದ್ದು, ಮರುದಿನ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss