ಕಾಸರಗೋಡು: ಕೋವಿಡ್-19 ಹಿನ್ನೆಲೆಯಲ್ಲಿ ಚಟುವಟಿಕೆ ಸ್ಥಗಿತಗೊಳಿಸಲಾಗಿದ್ದ ಕಾಸರಗೋಡು ಜಿಲ್ಲೆಯ ಇಲೆಕ್ಟ್ರಿಕಲ್ ಸೆಕ್ಷನ್ ಕಚೇರಿಗಳ ಕ್ಯಾಷ್ ಕೌಂಟರ್ ಗಳು ಮೇ. 4 ರಿಂದ ಚಟುವಟಿಕೆ ಆರಂಭಿಸಿವೆ. ಈ ವೇಳೆ ಜನನಿಭಿಡತೆ ನಿಯಂತ್ರಿಸುವ ನಿಟ್ಟಿನಲ್ಲಿ ಹಣ ಪಾವತಿಗೆ ಗ್ರಾಹಕ ನಂಬರ್ ಹಿನ್ನೆಲೆಯಲ್ಲಿ ದಿನಾಂಕ ನಿಗದಿ ಪಡಿಸಲಾಗಿದೆ.
ಕನ್ಸ್ಯೂ ಮರ್ ನಂಬರ್ 0 (ಸೊನ್ನೆ)ಯಲ್ಲಿ ಕೊನೆಗೊಳ್ಳುವ ಮಂದಿ ಮೇ 4ರಂದು ಹಣ ಪಾವತಿಸಬಹುದು. ಕನ್ಸ್ಯೂ ಮರ್ ನಂಬರ್ 1 ರಲ್ಲಿ ಕೊನೆಗೊಳ್ಳುವ ಮಂದಿ ಮೇ.5ರಂದು, 2ರಲ್ಲಿ ಕೊನೆಗೊಳ್ಳುವವರು ಮೇ.6ರಂದು ಹಣ ಪಾವತಿಸಬಹುದು. ಕನ್ಸ್ಯೂ ಮರ್ ನಂಬರ್ 3ರಲ್ಲಿ ಕೊನೆಗೊಳ್ಳುವ ಮಂದಿ ಮೇ.7ರಂದು, 4ರಲ್ಲಿ ಕೊನೆಗೊಳ್ಳುವ ಮಂದಿ ಮೇ.8ರಂದು, 5ರಲ್ಲಿ ಕೊನೆಗೊಳ್ಳುವ ಮಂದಿ ಮೇ.11ರಂದು, ಕನ್ಸ್ಯೂ ಮರ್ ನಂಬರ್ 6ರಲ್ಲಿ ಕೊನೆಗೊಳ್ಳುವ ಮಂದಿ ಮೇ.12ರಂದು, 7ರಲ್ಲಿ ಕೊನೆಗೊಳ್ಳುವ ಮಂದಿ ಮೇ.13ರಂದು, 8ರಲ್ಲಿ ಕೊನೆಗೊಳ್ಳುವ ಕನ್ಸ್ಯೂ ಮರ್ ನಂಬರ್ ಅವರು ಮೇ.14ರಂದು, 9ರಲ್ಲಿ ಕೊನೆಗೊಳ್ಳುವ ಕನ್ಸ್ಯೂ ಮರ್ ನಂಬರ್ ಹೊಂದಿರುವವರು ಮೇ 15ರಂದು ಹಣ ಪಾವತಿಸಬಹುದಾಗಿದೆ.