Saturday, July 2, 2022

Latest Posts

ಇಳಯದಳಪತಿ ವಿಜಯ್ ಮನೆಯ ಮೇಲೆ ಐಟಿ ದಾಳಿ!?

ತಮಿಳು ನಾಡು: ಆದಾಯ ತೆರಿಗೆ ಇಲಾಖೆ ವತಿಯಿಂದ ದೇಶದ ಪ್ರಖ್ಯಾತ ನಟರು ಮತ್ತು ರಾಜಕಾರಣಿಗಳ ಆಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಇದೀಗ ತಮಿಳು ಚಿತ್ರರಂಗದ ಖ್ಯಾತ ನಟ ಇಳಯದಳಪತಿ ವಿಜಯ್ ಮತ್ತು ಅವರ ಆಪ್ತ ಫೈನಾನ್ಶಿಯರ್ ಅನ್ ಬು ಚೆಲಿಯಾನ್ ಅವರ ಮನೆ ಮತ್ತು ಕಛೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ವಿಚಾರವಾಗಿ ವಿಜಯ್ ಚೆನ್ನೈ ನಿವಾಸ ಮತ್ತು ಅನ್ ಬು ಚೆಲಿಯಾನ್ ರ ಮನೆ ಹಾಗೂ ಕಛೇರಿಯ ಮೇಲೆ ಫೆ.5ರಂದು ಐಟಿ ಅಧಿಕಾರಿಗಳಿಂದ ದಾಳಿ ನಡೆಸಿದ್ದು, ಸುಮಾರು 38 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳಿಗೆ ಒಟ್ಟು 65 ಕೋಟಿ ರೂ. ಪತ್ತೆಯಾಗಿದೆ. ಫೈನಾನ್ಶಿಯರ್ ಅನ್ ಬು ಚೆಲಿಯಾನ್ ಆಸ್ತಿಗಳನ್ನು ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದಾರೆ, ಈ ಸಂಬಂಧ ತೆರಿಗೆ ವಂಚಿತ ಹೆಚ್ಚಿನ ಹಣ ಸಿಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಮಾಸ್ಟರ್ ಚಿತ್ರದ ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿರುವ ವಿಜಯ್ ರನ್ನು ಭೇಟಿ ಯಾಗಲು ಅಧಿಕಾರಿಗಳು ಶೂಟಿಂಗ್ ಸ್ಪಾಟ್ ಗೆ ಭೇಟಿ ನೀಡಿದ್ದಾರೆ. ವಿಜಯ್ ಅವರನ್ನು ವಿಚಾರಣೆಗೆ ಒಳಪಡಿಸಿರುವುದರಿಂದ ಮಾಸ್ಟರ್ ಚಿತ್ರದ ಚಿತ್ರೀಕರಣ ಸ್ಥಗಿತವಾಗಿದೆ. ಕಳೆದ ವರ್ಷ ತೆರೆಕಂಡ ಬಿಗಿಲ್ ಚಿತ್ರದ ನಿರ್ಮಾಪಕರ ಮನೆಯ ಮೇಲೆ ದಾಳಿಯಾಗಿದ್ದು, ವಿಜಯ್ ಸಂಪಾದಿಸಿದ ಬಹುಕೋಟಿ ಮೊತ್ತದ ಸಂಭಾವನೆ ವಿಚಾರವಾಗಿ ಐಟಿ ಅಧಿಕಾರಿಗಳು ಮಾಸ್ಟರ್ ಸಿನಿಮಾ ಸೆಟ್ ಗೆ ಬೇಟಿ ನೀಡಿ ವಿಜಯ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂಬ ವರದಿಯಾಗಿದೆ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss