Friday, August 12, 2022

Latest Posts

ಇಷ್ಟವೇ ಇಲ್ಲದಿದ್ದರೂ ನೀವು ಕೆಲಸ ಮಾಡುತ್ತಿದ್ದೀರಾ? ಪ್ರೀತಿಯಿಂದ ಕೆಲಸ ಮಾಡಲು ಇಲ್ಲಿದೆ ಕೆಲ ಟಿಪ್ಸ್..

ಓದಿದ ನಂತರ ಕೆಲಸ ಮಾಡುವುದು ಎಷ್ಟೋ ಜನರ ಕನಸು, ಇನ್ನಷ್ಟು ಜನರಿಗೆ ಅನಿವಾರ್ಯ, ಇನ್ನು ಹಲವರಿಗೆ ಕಲಿಯುವ ಅವಕಾಶ. ಕೆಲಸಕ್ಕೆ ಸೇರುವಾಗ ಇದ್ದ ಆಸಕ್ತಿ ಬರುಬರುತ್ತಾ ಕಡಿಮೆಯಾಗುತ್ತದೆ. ಕೆಲಸ ಇಷ್ಟಪಟ್ಟು ಅಲ್ಲ, ಕಷ್ಟಪಟ್ಟು ಮಾಡುತ್ತಿದ್ದೇವೆ ಎನಿಸುತ್ತದೆ. ಆದರೆ ನಮ್ಮ ಕೆಲಸವನ್ನು ನಾವು ಪ್ರೀತಿಸುವುದು ತುಂಬಾ ಮುಖ್ಯ. ಪ್ರೀತಿ ಇಲ್ಲದ ಕೆಲಸ ಬರುಬರುತ್ತಾ ಕುತ್ತಿಗೆಗೆ ಬಂದಂತಾಗುತ್ತದೆ. ನಾವು ನಮ್ಮ ಕೆಲವನ್ನು ಇಷ್ಟಪಡಬೇಕು, ನಿಮ್ಮ ಕೆಲಸ ಹೇಗೆ ಮಾಡಬೇಕು? ಇಲ್ಲಿ ನೋಡಿ..
ನಿಮ್ಮ ಸೀನಿಯರ್ ಗೈಡೆನ್ಸ್ ಸದಾ ಇರಲಿ: ನೀವು ಕೆಲಸ ಮಾಡುವಾಗ, ನಿಮಗೆ ಏನೋ ಗೊತ್ತಾಗಲಿಲ್ಲ ಎಂದರೆ ನಿಮ್ಮ ಸೀನಿಯರ್ ಸಹಾಯ ಮಾಡುತ್ತಾರೆ. ಅಲ್ಲಿ ನಿಮ್ಮ ಕಲಿಕೆ ಇದೆ. ಸೀನಿಯರ್‌ಗಳು ಹೇಗೆ ಕೆಲಸ ಮಾಡುತ್ತಾರೆ. ಅವರ ಬಳಿ ನಿಮ್ಮ ಸವಾಲುಗಳನ್ನು ಕೇಳಿ ಉತ್ತರ ಪಡೆಯಿರಿ. ಒಂದು ಗೋಲ್ ಸೆಟ್ ಮಾಡಿಕೊಳ್ಳಲು ಅವರು ಸಹಕರಿಸುತ್ತಾರೆ.
ನಿಮ್ಮ ಲಿಸ್ಟ್ ಎಲ್ಲಿ?: ಪ್ರತಿಯೊಬ್ಬರು ಕೆಲಸ ಮಾಡುವಾಗ ಒಂದು ಲಿಸ್ಟ್ ಮಾಡಬೇಕು. ಅದೇನು ಅಂತೀರಾ ನಿಮ್ಮ ನ್ಯೂನತೆಗಳ ಲಿಸ್ಟ್. ಇಲ್ಲಿ ನಿಮಗೆ ಯಾವ ಕೆಲಸದ ಪಾರ್ಟ್ ಕಷ್ಟ ಎನಿಸುತ್ತಿದೆ. ಇದನ್ನು ನೀವು ಹೇಗೆ ಇಂಪ್ರೂವ್ ಮಾಡಬೇಕು? ಇದಕ್ಕೆ ಯಾರ ಸಹಾಯ ಬೇಕು ಯೋಚಿಸಿ.
ನಿಮ್ಮಿಷ್ಟದ ಕೆಲಸ ಏನು?: ಕೆಲಸ ಎಂದರೆ ಅದರಲ್ಲಿ ನೂರಾರು ಥರ ಇರುತ್ತದೆ. ಅದರಲ್ಲಿ ನಿಮ್ಮ ಇಷ್ಟದ ಕೆಲಸ ಯಾವುದು? ನಿಮಗೆ ಯಾವ ಡಿಪಾರ್ಟ್‌ಮೆಂಟ್ ಇಷ್ಟ. ಅಲ್ಲಿಗೆ ಹೋಗಲು ನೀವೇನು ಮಾಡಬೇಕು. ಇದನ್ನು ಯೋಚಿಸಿ.
ಸಹಾಯ ಕೇಳಲು ಭಯ ಬೇಡ: ಸೀನಿಯರ್‌ಗಳು ಕೊಲೀಗ್‌ಗಳು ಮಾತನಾಡಿಸಿದರೆ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂಬ ಭಯ ಬೇಡ. ನಿಮಗೆ ಸಹಾಯ ಕೇಳಲು ಯಾರೂ ಅವರಾಗೇ ಬರುವುದಿಲ್ಲ. ನೀವು ಹೆಲ್ಪ್ ಕೇಳಿದರೆ ಯಾರು ಇಲ್ಲ ಎಂದೂ ಹೇಳುವುದಿಲ್ಲ. ಹಾಗಾಗಿ ತಪ್ಪು ಕೆಲಸ ಮಾಡುವ ಬದಲು ಸಹಾಯ ಕೇಳಿ.
ಸ್ನೇಹದಿಂದ ಇರಿ: ಮುಖ ಗಂಟುಹಾಕಿಕೊಂಡು ನಿಮ್ಮ ಪಾಡಿಗೆ ನೀವು ಕೂತು ಕೆಲಸ ಮಾಡಬೇಡಿ. ನಿಮ್ಮ ನೆಟ್‌ವರ್ಕ್‌ಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಜೊತೆಗೆ ಎಲ್ಲರ ಜೊತೆ ಸ್ನೇಹಭಾವದಿಂದ ವರ್ತಿಸಿ. ಮಾಡುವ ಕೆಲಸದಲ್ಲಿ ಖುಷಿ ಇರಲಿ.
ಅಪ್‌ಡೇಟ್ ಆಗಿ: ಯಾವುದೇ ಕೆಲಸವಾಗಿರಲಿ ನೀವು ಅಪ್‌ಡೇಟ್ ಆಗಿರುವುದು ತುಂಬಾನೆ ಒಳ್ಳೆಯದು. ನಿಮಗೆ ಗೊತ್ತಿಲ್ಲದ ಅಂಶಗಳು ಕಂಡುಬಂದರೆ ತಕ್ಷಣ ಅದನ್ನು ಹುಡುಕಿ. ಬಿಡುವಿನ ಸಮಯದಲ್ಲಿ ನಿಮ್ಮ ವಿಷಯದ ಬಗ್ಗೆ ರಿಸರ್ಚ್ ಮಾಡುತ್ತಿರಿ.
ಆಫೀಸಿನಲ್ಲಿ ಸಂಬಂಧಗಳು ಬೇಡ: ನಿಮ್ಮ ಕೊಲೀಗ್ಸ್ ನಿಮ್ಮ ಸ್ನೇಹಿತರೇ ಇರಬಹುದು, ಆದರೆ ಪರ್ಸನಲ್ ರಿಲೇಶನ್‌ಶಿಪ್‌ಗಳು ಬೇಡ.ನಿಮ್ಮದಷ್ಟನ್ನೇ ನೀವು ನೋಡಿಕೊಳ್ಳಿ. ಅನಾವಶ್ಯಕವಾಗಿ ಯಾರ ಜೀವನದಲ್ಲೂ ಮೂಗು ತೂರಿಸಬೇಡಿ.
ಕೆಲಸ ಕಲಿಕೆ ಎಂದುಕೊಳ್ಳಿ: ಪ್ರತಿದಿನ ನಾನು ಹೊಸತೇನನ್ನೋ ಕಲಿಯುತ್ತಿದ್ದೇನೆ. ಸೀನಿಯರ್‌ಗಳ ಜೊತೆ ನಾನು ಪೊಲೈಟ್ ಆಗಿ ಬಿಹೇವ್ ಮಾಡುತ್ತೇನೆ.ಹೀಗೆ ಅಂದುಕೊಳ್ಳಿ. ಇದು ನಿಮ್ಮ ಪರ್ಸ್‌ನಲ್ ಜೀವನಕ್ಕೂ ಸಹಾಯ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss