ಹೊಸ ದಿಗಂತ ವರದಿ, ಹುಣಸಗಿ (ಯಾದಗಿರಿ)
ಹುಣಸಗಿ ಸಮೀಪದ ನಾರಾಯಣಪುರ ಜಲಾಶಯದ ಎಡದಂಡೆ ಮುಖ್ಯ ನಾಲೆಯ 50 ನೆ ಕಿ.ಮಿ ಇಸಾಂಪುರ ಬಳಿ ಕಾಲುವೆಯ ಎಡ ಬದಿ ಒಂದು ಚೈನದಷ್ಟು(90 ಅಡಿ)ಮೆಲ್ಭಾಗ ಕುಸಿತ ಕಂಡು ಬಂದಿದೆ. ಮೆಲ್ನೋಟಕ್ಕೆ ಸದ್ಯದ ಕುಸಿತದಿಂದ ಯಾವುದೆ ಅಪಾಯ ಇಲ್ಲದಿದ್ದರೂ ಬೇಸಿಗೆಯಲ್ಲಿ ತಳದಿಂದ ಕಾಲುವೆಯ ಒಳಬದಿ ಕುಸಿಯುವ ಭೀತಿ ಎದುರಾಗಬಹುದು ಎಂಬ ಆತಂಕ ಅನ್ನದಾತರಲ್ಲಿ ಹುಟ್ಟಿದೆ.
ಆದರೆ ನೀರಾವರಿ ಅಧಿಕಾರಿಗಳು ಹೇಳುವಂತೆ 26,63, 53 ನೇ ಕಿ.ಮಿ ನಲ್ಲಿ ಇದೆ ರೀತಿಯ ಕುಸಿತ ಈ ಹಿಂದೆ ಉಂಟಾಗಿತ್ತು. ಅದರಿಂದ ಯಾವುದೇ ಅಪಾಯವಾಗಿಲ್ಲ ಅದಕ್ಕಾಗಿ ರೈತರು ಭಯ ಪಡುವ ಕಾರಣ ಇಲ್ಲಾ ಎಂದು ಎಇಇ ಮಹಾಲಿಂಗರಾಜು ಹೇಳಿದ್ದಾರೆ.ಈಗ ಕುಸಿತ ಗೊಂಡಿರುವ ಅಲ್ಪ ಪ್ರಮಾಣದ ಸ್ಥಳವನ್ನು ನಮ್ಮ ಹಿರಿಯ ಅಧಿಕಾರಿಗಳನ್ನು ಈಗಾಗಲೆ ಪರಿಶಿಲಿಸಿದ್ದಾರೆ. ಇನ್ನು ಕುಸಿತಕ್ಕೆ ಉಡು, ಹುಲ್ಲು-ಕಂಟಿ ಬೆಳೆದು ಉಂಟಾಗಿರುವ ಬಿರುಕು ಇದಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರ ಪ್ರತಿ ವರ್ಷ ಕಾಲುವೆ ನಿರ್ವಹಣೆಗೆ ಸಾಕಷ್ಟು ಹಣ ವೆಚ್ಚಮಾಡುತ್ತದೆ. ಆದರೂ ಈ ರೀತಿ ಬಿರಕು ಬಿಡುವುದು ರೈತರನ್ನು ಕಂಗಡೆಸಿದಿ ಎಂದರೆ ತಪ್ಪಾಗಲಿಕ್ಕಿಲ್ಲ.
ರೈತರ ನಿದ್ದೆ ಕೆಡಿಸಿದೆ
ನಾರಾಯಣಪುರ ಎಡದಂಡೆ ನಾಲೆಯ ನಿರ್ಮಿಸಿದ ನಲವತ್ತು ವರ್ಷಗಳ ನಂತರ ಸಾವಿರಾರು ಕೋಟಿ ಖರ್ಚು ಮಾಡಿ ನವೀಕರಣ ಮಾಡಲಾಗಿತ್ತು. ನವೀಕರಣದ ನಂತರವು 63, 59, 51 ಕಿ.ಮೀ ಗಳಲ್ಲಿ ಕಾಲುವೆ ಕುಸಿತ ಗೊಂಡು ಮತ್ತೆ ದುರಸ್ತಿ ಮಾಡಿದ್ದು ಸ್ಮರಿಸಬಹುದು. ಕಳೆದ ಎರಡು ವರ್ಷಗಳಿಂದ ಕಾಲುವೆ ಕುಸಿತದ ಯಾವುದೆ ವರದಿಯಾಗಿದ್ದಿಲ್ಲ್ಲ. ಆದರೆ ಸದ್ಯ ಕಂಡು ಬರುತ್ತಿರುವ ಕುಸಿತದ ಪ್ರಮಾಣ ಮುಂದಿನ ದಿನಗಳಲ್ಲಿ ಅಪಾಯ ತಂದೊಡ್ಡ ಬಹುದುಲ್ಲೆಂಬುದು ಭೀತಿಗೆ ಕಾರಣವಾಗಿದೆ ಎಂಬುದು ರೈತರಲ್ಲಿ ಕೇಳಿಬರುತ್ತಿದೆ.
ನಾರಾಯಣಪುರ ಎಡದಂಡೆ ನಾಲೆಯು ಹತ್ತು ಸಾವಿರ ಕ್ಯುಸೆಕ್ಸ ನೀರು ಹರಿಸುವ ಸಾಮರ್ಥ್ಯ ಹೊಂದಿದ್ದು. ಇಂಡಿ, ಸಿಂದಗಿ, ಜೇವರ್ಗಿ, ಶಹಾಪುರ, ಸುರಪುರ ತಾಲೂಕಿನ ಹದಿನೈದು ಲಕ್ಷ ಎಕರೆಗೆ ನೀರು ಹರಿಸಬೇಕಿದೆ. ಆದರೆ ಪದೆ ಪದೆ ಕಾಲುವೆ ಕುಸಿತದ ಸುದ್ದಿ ಈ ಭಾಗದ ರೈತರ ನಿದ್ದೆ ಕೆಡಿಸಿದೆ.
ಆತಂಕ ಪಡುವ ಅಗತ್ಯವಿಲ್ಲ
ಕಾಲುವೆ ಮೆಲ್ಭಾಗದ ಬಿರುಕಿನಿಂದ ಕಾಲುವೆ ನೀರು ಸರಾಗವಾಗಿ ಹರಿಯುವಲ್ಲಿ ಯಾವುದೆ ತೊಂದರೆ ಇಲ್ಲಾ. ರೈತರು ಆತಂಕ ಪಡುವ ಕಾರಣ ಇಲ್ಲ.. ಕುಸಿತದ ಸ್ಥಳವನ್ನು ನಾನೆ ಖುದ್ದಾಗಿ ಪರೀಶೀಲನೆ ಮಾಡಿದ್ದು, ಇದನ್ನು ಕುಸಿತ ಅಂತ ಕರೆಯಲು ಬಾರದು. ಅನವಶ್ಯಕ ಗೊಂದಲ ಬೇಡಾ. ನೀರು ಅಷ್ಟೊಂದು ಮೇಲ್ಮಟ್ಟದಲ್ಲಿ ಕಾಲುವೆಯಲ್ಲಿ ಹರಿಯಲು ಸಾಧ್ಯವಿಲ್ಲ. ಎಲ್ಲಾ ರೈತರಿಗೂ ನೀರು ಒದಗಿಸಲಾಗುವುದು
ಎಂದು ಇಇ. ಕೆಬಿಜೆಎನ್ ಎಲ್ ನ ಶಂಕರ ನಾಯಕೋಡಿ ತಿಳಿಸಿದ್ದಾರೆ.