ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) 51ನೇ ಮಿಷನ್ʼನ್ನ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ‘ಇಂದು ಪಿಎಸ್ ಎಲ್ ವಿ-ಸಿ49/ಇಓಎಸ್-01 ಮಿಷನ್ʼನ ಯಶಸ್ವಿ ಉಡಾವಣೆಗೆ ಇಸ್ರೋ ಮತ್ತು ಭಾರತದ ಬಾಹ್ಯಾಕಾಶ ಉದ್ಯಮವನ್ನ ನಾನು ಅಭಿನಂದಿಸುತ್ತೇನೆ. ಕೋವಿಡ್-19 ರ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಗಡುವನ್ನ ಪೂರೈಸಲು ಅನೇಕ ನಿರ್ಬಂಧಗಳನ್ನು ಮೀರಿಹೋದರು’ ಎಂದಿದ್ದಾರೆ.