Thursday, June 30, 2022

Latest Posts

ಇಸ್ರೋದಿಂದ ಪಿಎಸ್ಎಲ್‌ವಿ-ಸಿ50 ಉಡಾವಣೆ: ಕಕ್ಷೆ ಸೇರಿದ ಸಂವಹನ ಉಪಗ್ರಹ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂವಹನ ಉಪಗ್ರಹವನ್ನು ಹೊತ್ತು ನಭಕ್ಕೆ ಜಿಗಿದ ಪಿಎಸ್ಎಲ್‌ವಿ-ಸಿ50 ರಾಕೆಟ್ ‌ ಯಶಸ್ವಿಯಾಗಿ ಸಂವಹನ ಉಪಗ್ರಹವನ್ನು ಕಕ್ಷೆ ಸೇರಿಸಿದೆ.
ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದ ಎರಡನೇಯ ಉಡಾವಣಾ ಘಟಕದಿಂದ ಮಧ್ಯಾಹ್ನ ಸರಿಯಾಗಿ 3 ಗಂಟೆ 41 ನಿಮಿಷಕ್ಕೆ ಉಪಗ್ರಹದ ಉಡ್ಡಯನ ನಡೆಯಿತು. ಸಿಎಮ್ ಎಸ್-01, ಆವರ್ತನ ಸ್ಪೆಕ್ಟ್ರಂನ ವಿಸ್ತರಿತ-ಸಿ ಬ್ಯಾಂಡ್ ನಲ್ಲಿ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿದ್ದು, ಇದರ ವ್ಯಾಪ್ತಿಭಾರತೀಯ ಮುಖ್ಯ ಭೂಮಿ, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳನ್ನು ಒಳಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಸದ್ಯ ಕಕ್ಷೆಯಲ್ಲಿರುವ CMS-01 ಸಂವಹನ ಉಪಗ್ರಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ನಿಗದಿತ ಸ್ಲಾಟ್‌ನಲ್ಲಿ ಉಪಗ್ರಹವನ್ನು ಇರಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss