Wednesday, August 10, 2022

Latest Posts

ಈಗಿನ ವಾಟ್ಸಾಪ್ ಯುಗದಲ್ಲಿ Love letter ಬೋರಿಂಗ್ ಅಂತೀರಾ? ಲವ್ ಲೆಟರ್ ಬರೆಯುವುದರಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ..

ಈಗಿನ ವಾಟ್ಸಾಪ್ ಯುಗದಲ್ಲಿ ಪ್ರೇಮ ಪತ್ರ ಯಾರು ಬರೆಯಯುತ್ತಾರೆ ಅಲ್ಲವಾ? ಮೊಬೈಲ್‌ಗಳು ಬಂದ ನಂತರ ಜನ ಪತ್ರ ಬರೆಯುವುದನ್ನು ನಿಲ್ಲಿಸಿದ್ದಾರೆ. ಅದರಲ್ಲೂ ಪ್ರೇಮ ಪತ್ರಗಳನ್ನು ಯಾರೂ ಬರೆಯುವುದಿಲ್ಲ. ಆದರೆ ಪ್ರೇಮಪತ್ರದಲ್ಲಿ ಸಿಗುವ ಖುಷಿ ಸಾವಿರ ಮೆಸೇಜ್‌ಗಳಲ್ಲಿಯೂ ಇಲ್ಲ. ಲವ್ ಲೆಟರ್ ಓಲ್ಡ್ ಫ್ಯಾಷನ್ ಅನ್ನುವವರು ಖಂಡಿತಾ ಈ ಆರ‍್ಟಿಕಲ್ ಓದಲೇಬೇಕು. ಇದು ಕೇವಲ ಲವರ‍್ಸ್‌ಗಾಗಿ ಅಲ್ಲ, ಗಂಡ ಹೆಂಡತಿ ನಡುವೆ ಕೂಡ ಆಗಾಗ ಈ ರೀತಿ ಪತ್ರದ ರೊಮ್ಯಾನ್ಸ್ ಇದ್ದರೆ ನಿಮ್ಮ ಜೀವನ ಬದಲಾಗುತ್ತದೆ ಹೇಗೆ ನೋಡಿ..

  • ಪ್ರೇಮ ಪತ್ರ ಈಗಲೂ ರೊಮ್ಯಾಂಟಿಕ್: ಏನೇ ಹೇಳಿ ಪ್ರೇಮ ಪತ್ರ ಈಗಲೂ ರೊಮ್ಯಾಂಟಿಕ್. ನಿಮ್ಮ ಪ್ರೀತಿಪಾತ್ರರು ನಿಮಗೆ ಏನು ಎಂದು ಎದುರು ಹೇಳಿದರೂ ಚೆನ್ನಾಗಿಯೇ ಇರುತ್ತದೆ ಜೊತೆಗೆ ಪತ್ರ ಬರೆದರೆ ಅದರ ಖುಷಿಯೇ ಬೇರೆ. ನೀವು ಅವರನ್ನು ಭೇಟಿಯಾಗಿ ಎರಡೇ ದಿನಕ್ಕೆ ಒಂದು ಪತ್ರ ಬರೆದು ಕಳಿಸಿ. ಅದನ್ನು ಓದಿ ಅವರು ಥ್ರಿಲ್ ಆಗುವುದು ಗ್ಯಾರೆಂಟಿ. ಇದು ತುಂಬಾನೆ ರೊಮ್ಯಾಂಟಿಕ್.
  • ಬೆಸ್ಟ್ ಸಪ್ರೈಸ್: ಮನೆಗೆ ನೀವು ಬಂದಾಗ ನಿಮಗೆ ಯಾರಾಧರೂ ಗಿಫ್ಟ್ ಆರ್ಡರ್ ಮಾಡಿದ್ದರೆ, ಅದು ಮನೆಗೆ ಬಂದಾಗ ನಿಮಗೆ ಹೇಗೆ ಅನಿಸುತ್ತದೆ? ಗಿಫ್ಟ್ ಜೊತೆಗೆ ಒಂದು ಪತ್ರವಿದ್ದರೆ? ಇದನ್ನು ನೀವು ನಿರೀಕ್ಷೆ ಮಾಡಿರುವುದಿಲ್ಲ. ಇದು ಅತೀವ ಸಂತೋಷ ನೀಡುತ್ತದೆ.
  • ಪತ್ರ ಬರೆಯಲು ದೂರ ಇರಬೇಕೆಂದೇನಿಲ್ಲ: ನನ್ನ ಪ್ರೀತಿಪಾತ್ರರು ಒಂದೇ ಊರಿನಲ್ಲಿ ಇದ್ದೇವೆ ಎಂದೋ ಅಥವಾ ಮದುವೆಯಾಗ ಒಟ್ಟಿಗೆ ಇದ್ದೀವಿ ಪತ್ರ ಬರೆಯಲು ಆಗುವುದಿಲ್ಲ ಎಂದರೆ ಅದು ಸುಳ್ಳು. ಸುಮ್ಮನೆ ಯಾವುದೋ ಒಂದು ದಿನ ಒಂದು ಪತ್ರ ಬರೆದು ಅವರಿಗೆ ಕೊಡಿ. ಇಲ್ಲ ಸಪ್ರೈಸ್ ರೀತಿಯಲ್ಲಿ ಗಿಫ್ಟ್ ಜೊತೆ ನೀಡಿ. ನಂತರ ನಿಮ್ಮ ಅನುಭವ ಹೇಗಿರುತ್ತದೆ? ಬರ್ಥಡೇ ಆನಿವರ್ಸರಿ ಹೀಗೆ ಎಲ್ಲದಕ್ಕೂ ಪ್ರೇಮ ಪತ್ರ ಬರೆಯಿರಿ.
  • ಪತ್ರ ಬರೆದರೆ ಉತ್ತರಕ್ಕಾಗಿ ಕಾಯಬೇಕಿಲ್ಲ: ಮೊಬೈಲ್‌ನಲ್ಲಿ ಮೆಸೇಜ್ ಮಾಡಿ ಕಾಯುತ್ತಾರೆ. ಉತ್ತರ ಬರಲಿಲ್ಲ ಎಂದರೆ ಕೋಪ ಬರುತ್ತದೆ. ಉತ್ತರ ಲೇಟಾಗಿ ಬಂದರೂ ಕೋಪ ಬರುತ್ತದೆ. ಇನ್ನು ಮೆಸೇಜ್ ನೋಡಿಯೇ ಇಲ್ಲ ಎಂದರೆ ಮುಗಿದೇ ಹೋಯ್ತು. ಆದರೆ ಪತ್ರ ಬರೆದರೆ ಈ ಗೋಜೆ ಇರುವುದಿಲ್ಲ. ಪತ್ರ ತಲುಪಿದ್ದರೆ ಅವರೇ ಉತ್ತರಿಸುತ್ತಾರೆ. ಉತ್ತರಿಸಲಿಲ್ಲ ಎಂದರೆ ಇನ್ನೂ ಪತ್ರ ತಲುಪಿಲ್ಲ ಎಂದು ಸುಮ್ಮನಿರಬಹುದು ಅಲ್ಲವಾ?!
  • ನಿಮ್ಮ ಆಲೋಚನೆಗಳೇನು?: ಮೊಬೈಲ್‌ನಲ್ಲಿ ಎದುರುಗಡೆ ಮಾತನಾಡುವ ಮಾತುಗಳು ಪತ್ರದಲ್ಲಿ ಇರುವುದಿಲ್ಲ. ಒಂದು ಖಾಲಿ ಹಾಳೆ, ಜೊತೆಗೆ ಪೆನ್ ಇಟ್ಟು ಕುಳಿತುಕೊಳ್ಳಿ. ಅವರ ಬಗ್ಗೆ ನಿಮಗೇನಸಿತ್ತದೆ. ಏನು ಬರೆಯಬೇಕು, ನಿಮ್ಮ ಆಲೋಚನೆಗಳೇನು. ನಿಮಗೆ ಗೊತ್ತಿಲ್ಲದ ವಿಚಾರ ಹಾಳೆಮೇಲೆ ಗೀಚಲು ಆರಂಭಿಸುತ್ತೀರಿ.
  • ಸಾರಿ ಕೇಳುವುದು ಸುಲಭ: ಏನೋ ತಪ್ಪು ಮಾಡಿರುತ್ತೀರಿ. ಕಣ್ಣಲ್ಲಿ ಕಣ್ಣಿಟ್ಟು ಕ್ಷಮೆ ಕೇಳಲೂ ಆಗುವುದಿಲ್ಲ. ಅಂಥ ಸಂದರ್ಭದಲ್ಲಿ ನಿಮ್ಮ ಕೆಲಸ ಸುಲಭ ಮಾಡುವುದು ಪ್ರೇಮ ಪತ್ರಗಳೇ. ನೀವು ಹೇಳುವುದನ್ನು ಅವರು ಕೇಳುವುದಿಲ್ಲ. ಅವರು ಹೇಳಿದ ಇನ್ನೇನೋ ನಿಮಗೆ ಹಿಡಿಸುವುದಿಲ್ಲ. ಇಂಥಾ ಸಮಯದಲ್ಲಿ ಪತ್ರ ಬರೆಯುವುದು ಇಬ್ಬರಿಗೂ ಒಳ್ಳೆಯದು.
  • ಸ್ಟಿಕಿ ನೋಟ್ಸ್ ಬಳಸಿ: ಮಾತನಾಡುವುದು ನಿಂತಾಗ ಸ್ಟಿಕಿ ನೋಟ್ಸ್ ಬಳಸಿ, ಇನ್ನು ಗಂಡ ಹೆಂಡತಿ ಅಥವಾ ಲವರ್‌ಗೆ ಥ್ಯಾಂಕ್ಸ್,ಸಾರಿ ಎಲ್ಲ ಹೇಳುವುದಿಲ್ಲ. ಆದರೆ ಅದೂ ಮುಖ್ಯ. ಆಗಾಗ ಸ್ಟಿಕಿ ನೋಟ್ ಮೇಲೆ ಲವ್ ಯು, ಸಾರಿ, ಥ್ಯಾಂಕ್ಯೂ ಈ ರೀತಿ ಬರೆಯುತ್ತಿರಿ..

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss