ಹೊಸದಿಗಂತ ಆನ್ಲೈನ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿರುವ ‘ಖಾಸಗಿತನ’ ಗೊಂದಲಗಳಿಗೆ ವಾಟ್ಸ್ಆಪ್ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದೆ.
ನಿಮ್ಮ ಯಾವುದೇ ವೈಯಕ್ತಿಕ ಸಂದೇಶ, ಕರೆಗಳನ್ನ ವಾಟ್ಸ್ಆಪ್ ಆಗಲಿ ಫೇಸ್ ಬುಕ್ ಆಗಲಿ ಕೇಳಿಸಿಕೊಳ್ಳೋದಿಲ್ಲ. ಎಲ್ಲ ಬಳಕೆದಾರರ ಕರೆ ಹಾಗೂ ಸಂದೇಶದ ಮಾಹಿತಿಯನ್ನ ನಾವು ಸ್ಟೋರ್ ಮಾಡಿಕೊಳ್ಳೋದಿಲ್ಲ, ನಿಮ್ಮ ಕ್ಯಾಂಟಾಕ್ಟ್ ಲಿಸ್ಟ್ ಮಾಹಿತಿಯನ್ನ ನಾವು ಫೇಸ್ಬುಕ್ ಜೊತೆ ಹಂಚಿಕೊಳ್ಳುವುದಿಲ್ಲ, ಅಗತ್ಯವಿದ್ದಲ್ಲಿ ನೀವು ಡಿಸೆಪಿಯರ್ ಮೆಸೇಜ್ ಆಯ್ಕೆಯನ್ನು ಬಳಸಬಹುದಾಗಿದೆ. ವಾಟ್ಸ್ಆಪ್, ಫೇಸ್ಬುಕ್ಗಳಲ್ಲಿ ನೀವು ಶೇರ್ ಮಾಡಿರುವ ಲೊಕೇಷನ್ನ್ನು ನೋಡಲಾಗುವುದಿಲ್ಲ, ಗ್ರೂಪ್ಗಳ ಖಾಸಗೀತನಕ್ಕೂ ಭಂಗವಿಲ್ಲ ಎಂದು ಅದು ಹೇಳಿದೆ.
ಇದಲ್ಲದೆ, ನಿಮ್ಮ ಖಾಸಗಿ ಸಂದೇಶಗಳ ಮೇಲೆ ಹೊಸ ಷರತ್ತು, ನಿಯಮ ಪರಿಣಾಮ ಬೀರುವುದಿಲ್ಲ. ಈ ಹಿಂದಿನಂತೆಯೇ ನಿಮ್ಮ ಸಂದೇಶಗಳು ಎಂಡ್ ಟು ಎಂಡ್ ಎನ್ಕ್ರಿಪ್ಷನ್ನಲ್ಲೇ ಇರುತ್ತದೆ. ಕೇವಲ ವ್ಯವಹಾರದ ಉದ್ದೇಶದ ಸಂದೇಶಗಳಿಗೆ ಮಾತ್ರ ಹೊಸ ಷರತ್ತು ಹಾಗೂ ನಿಯಮಗಳ ಅನ್ವಯ ಎಂದು ಅದು ಹೇಳಿದೆ.
ಏನೇ ಇದ್ದರೂ ವಾಟ್ಸ್ಆಪ್ನ ಹೊಸ ಹೆಜ್ಜೆ ಬಳಕೆದಾರರಲ್ಲಿ ಅಸಮಾಧಾನ ಉಂಟುಮಾಡಿದ್ದು, ಅನುಮಾನದಿಂದಲೇ ನೋಡುವಂತಾಗಿದೆ. ಬೆಳವಣಿಗೆಯ ಬಳಿಕ ಬಳಕೆದಾರರು ಬೇರೆ ಅಪ್ಲಕೇಶನ್ಗಳತ್ತ ಮುಖಮಾಡುತ್ತಿರುವುದೂ ಕಂಡುಬರುತ್ತಿದೆ.