spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈಗ ನಾವು ವಿರೋಧಿಗಳಾಗಿದ್ದೇವೆ, ಅಂತೆಯೇ ಸ್ಪರ್ಧೆ ಮಾಡುತ್ತೇವೆ: ಎಲ್​ಜೆಪಿ ಸ್ಪರ್ಧೆ ಕುರಿತು ಅಮಿತ್‌ ಶಾ ಪ್ರತಿಕ್ರಿಯೆ

- Advertisement -Nitte

ಹೊಸದಿಲ್ಲಿ:  ಮೈತ್ರಿಕೂಟ ಯಾಕೆ ಮುರಿದುಬಿತ್ತು ಎಂಬುದನ್ನು ಬಿಹಾರದ ಜನರು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯ ನಂತರ ಎಲ್​ಜೆಪಿ ಮತ್ತೆ ಒಂದುಗೂಡುತ್ತಾ ಎಂಬುದನ್ನು ಕಾದುನೋಡಬೇಕು. ಆದರೆ, ಈಗ ನಾವು ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಾವು ಎಲ್​ಜೆಪಿ ಜೊತೆ ಹಲವು ಬಾರಿ ಮಾತುಕತೆ ನಡೆಸಿ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡುವ ಭರವಸೆ ನೀಡಿದ್ದೆವು. ಆದರೂ ಎಲ್​ಜೆಪಿ ಸಹಮತಕ್ಕೆ ಬರದೆ ಏಕಾಂಗಿ ಹೋರಾಟದ ನಿರ್ಧಾರ ಮಾಡಿತು. ಜೆಡಿಯು ಕೂಡ ಎಲ್​ಜೆಪಿಗೆ ಒಳ್ಳೆಯ ಸಂಖ್ಯೆಯ ಸೀಟು ಬಿಟ್ಟುಕೊಡಲು ತಯಾರಿತ್ತು. ತಾನೂ ಕೂಡ ಚಿರಾಗ್ ಪಾಸ್ವಾನ್ ಜೊತೆ ವೈಯಕ್ತಿಕವಾಗಿಯೂ ಮಾತನಾಡಿದ್ದೆ’ ಎಂದು ‌ ಶಾ ಹೇಳಿದ್ದಾರೆ.
ಎಲ್​ಜೆಪಿ ಪಕ್ಷ ಕೇಂದ್ರದ ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ರೂ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಹಾಗಾಗಿ ಬಿಹಾರದಲ್ಲಿ ಈಗ ನಾವು ಎಲ್​ಜೆಪಿ ಪಕ್ಷದ ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆ’ ಎಂದು ಅಮಿತ್‌ ಶಾ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss