ಶಿವಮೊಗ್ಗ: ಇಲ್ಲಿನ ತುಂಗಾ ನಾಲೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕಾರ್ಪೋರೇಟರ್ ಪುತ್ರನ ಶವ ಶನಿವಾರ ಪತ್ತೆಯಾಗಿದೆ.
ಮಹಾನಗರ ಪಾಲಿಕೆ ಸದಸ್ಯೆ ಆರತಿ ಅ.ಮ.ಪ್ರಕಾಶ್ ಅವರ ಮಗ ಪ್ರತೀಶ್ (24) ಮೃತಪಟ್ಟಿದ್ದು, ಇವರು ಸ್ನೇಹಿತರೊಂದಿಗೆ ಶುಕ್ರವಾರ ಈಜಾಡಲು ನಾಲೆಗೆ ಹೋಗಿದ್ದರು. ನಾಲೆಯಲ್ಲಿ ನೀರಿನ ಸೆಳುವು ಹೆಚ್ಚಿದ್ದರಿಂದಾಗಿ ಪ್ರತೀಶ್ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು.
ತುಂಗಾನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ನಡೆಸಿದ್ದರಾದರೂ ಸಿಕ್ಕಿರಲಿಲ್ಲ. ಶನಿವಾರ ರಾಮಿನಕೊಪ್ಪದ ಬಳಿ ನಾಲೆಯಲ್ಲಿ ಶವ ಪತ್ತೆಯಾಗಿದ್ದು,ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಗಳಿಗೆ ಶವ ನೀಡಲಾಗಿದೆ.