Thursday, August 18, 2022

Latest Posts

ಈಜುಗಾರ್ತಿ ಆರತಿ ಸಹಾ ಅವರಿಗೆ ಡೂಡಲ್ ಮೂಲಕ ಗೌರವ ಅರ್ಪಿಸಿದ ಗೂಗಲ್

ನವದೆಹಲಿ: ದೇಶದ ಹೆಮ್ಮೆಯ ಈಜುಗಾರ್ತಿ ಆರತಿ ಸಹಾ ಅವರ 80 ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಗೂಗಲ್ ಆಚರಿಸುತ್ತಿದೆ.
ಇಂದು ಗೂಗಲ್ ಡೂಡಲ್‌ನಲ್ಲಿ ಪದ್ಮಶ್ರೀ ಪುರಸ್ಕೃತ ಆರತಿ ಸಹಾ ಅವರ ಜನ್ಮದಿನ ನೆನಪಿಗಾಗಿ ಆಕರ್ಷಕ ಡೂಡಲ್ ಡಿಸೈನ್ ಮಾಡಿದೆ.
ಆರತಿ ಸಹಾ ಅವರು ಇಂಗ್ಲಿಷ್ ಕಾಲುವೆಯಲ್ಲಿ ಈಜಿ ದಾಖಲೆ ನಿರ್ಮಿಸಿದ ಮಹಿಳೆ. ಆರತಿ ಸಹಾ ಅವರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದು, ಇಂಗ್ಲಿಷ್ ಕಾಲುವೆಯಲ್ಲಿ ಈಜಿದ ಏಷ್ಯಾದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ೧೯೬೦ರಲ್ಲಿ ಆರತಿ ಸಹಾ ಅವರು ಪದ್ಮಶ್ರೀ ಗೌರವ ಪಡೆದು ಕ್ರೀಡಾಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಮಾಡಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ಪದ್ಮಶ್ರೀ ಗೌರವ ಪಡೆದ ಮೊದಲ ಮಹಿಳೆ ಇವರಾಗಿದ್ದಾರೆ. ಸೆ.೨೪ ೧೯೪೦ ರಲ್ಲಿ ಜನಿಸಿದ್ದ ಆರತಿ ಸಹ, ೨೩ ಆಗಸ್ಟ್ ೧೯೯೪ರಲ್ಲಿ ಇಹಲೋಕ ತ್ಯಜಿಸಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!