Sunday, June 26, 2022

Latest Posts

ಈಜು ತರಬೇತಿ ಕೇಂದ್ರಗಳ ಆರಂಭಕ್ಕೆ ಒಪ್ಪಿಗೆ: 12 ವರ್ಷದೊಳಗಿನವರು ಈಜುಕೊಳಕ್ಕೆ ಇಳಿಯುವಂತಿಲ್ಲ

ಹೊಸದಿಲ್ಲಿ:ಕೊರೋನಾ ಸೋಂಕು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ   ಸ್ಥಗಿತವಾಗಿದ್ದ ಈಜು ತರಬೇತಿ ಕೇಂದ್ರಗಳ ಆರಂಭಕ್ಕೆ ಕೇಂದ್ರಸರ್ಕಾರ ಒಪ್ಪಿಗೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಮತ್ತು ಯುವಜನ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮೈಕ್ರೋ ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಈಜುತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ, ಸರ್ಕಾರದ ಎಲ್ಲಾ ನಿಯಮಾವಳಿಗಳು ಭಾರತೀಯ ಕ್ರೀಡಾ ಪ್ರಾಧಾಕಾರ ಮತ್ತು ಇತರ ಕೇಂದ್ರಗಳಿಗೆ ಅನ್ವಯವಾಗಲಿವೆ.  ಕೇವಲ ಕ್ರೀಡಾ ಉದ್ದೇಶಕಾಗಿ ಮಾತ್ರ ತರಬೇತಿ ನೀಡಬೇಕು ಎಂದು ಕ್ರೀಡಾ ಸಚಿವಾಲಯದ ಮಾರ್ಗಸೂಚಿ ಹೇಳಿದೆ.

ಪ್ರಮುಖ ತರಬೇತುದಾರರೇ ಯಾವ ರೀತಿ ಮತ್ತು ಎಷ್ಟು ಸಿಬ್ಬಂದಿಯೊಂದಿಗೆ ತರಬೇತಿ ನೀಡಬೇಕು ಎಂಬುದನ್ನು ನಿರ್ಧರಿಸಬೇಕು. 12 ವರ್ಷದೊಳಗಿನ ಮಕ್ಕಳು ಈಜು ತರಬೇತಿಗೆ ಬರುವಂತಿಲ್ಲ. ಕೇವಲ ಕ್ರೀಡಾ ಉದ್ದೇಶಕಾಗಿ ಮಾತ್ರ ತರಬೇತಿ ನೀಡಬೇಕು. ಅಥ್ಲೀಟ್ ಗಳು ಹಾಗೂ ಸಿಬ್ಬಂದಿಯಿಂದ ಕೋವಿಡ್ ನೆಗೆಟಿವ್‌ ಬಗ್ಗೆ ಸ್ವಯಂ ದೃಢೀಕರಣ ಪತ್ರ ಪಡೆದಿರಬೇಕು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss