ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜನತೆಗೆ ಈದ್ ಅಲ್-ಅಧಾ ಹಬ್ಬದ ಶುಭಾಶಯ ಕೋರಿದರು.
ಈ ಹಬ್ಬವು ತ್ಯಾಗ ಮತ್ತು ಸೌಹಾರ್ದತೆಯ ಮನೋಭಾವವನ್ನು ಸಂಕೇತಿಸುತ್ತದೆ. ಒಬ್ಬರ ಯೋಗಕ್ಷೇಮಕ್ಕಾಗಿ ಕೆಲಸ ಮಾಡಲು ನಮಗೆ ಪ್ರೇರಣೆ ನೀಡುತ್ತದೆ. ಅದೇ ಸಮಯದಲ್ಲಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮತ್ತು ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಜನರು ಈ ಹಬ್ಬವನ್ನು ಆನಂದಿಸಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವಿಟರ್ ನಲ್ಲಿ ಕೋರಿದರು.
ಈದ್ ಮುಬಾರಕ್! ಈದ್ ಅಲ್-ಅಧಾ ದಂದು ಎಲ್ಲರಿಗೂ ಶುಭಾಶಯಗಳು. ನ್ಯಾಯಯುತ, ಸಾಮರಸ್ಯ ಮತ್ತು ಅಂತರ್ಗತ ಸಮಾಜವನ್ನು ರಚಿಸಲು ಈ ದಿನ ನಮಗೆ ಪ್ರೇರಣೆ ನೀಡಲಿ. ಸೋದರತ್ವ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಈದ್ ಅಲ್-ಅಧಾ ಇಸ್ಲಾಮಿಕ್ ಹಬ್ಬವಾಗಿದ್ದು, ಇಬ್ರಾಹಿಂ ತನ್ನ ಮಗನನ್ನು ತ್ಯಾಗ ಮಾಡುವ ಅಲ್ಲಾಹನ (ದೇವರ) ಆಜ್ಞೆಯನ್ನು ಅನುಸರಿಸಲು ಇಚ್ಛಿಸುವ ನೆನಪಿನಲ್ಲಿ ಆಚರಿಸಲಾಗುತ್ತದೆ.
https://twitter.com/rashtrapatibhvn/status/1289394116535521280?s=20
Eid Mubarak!
Greetings on Eid al-Adha. May this day inspire us to create a just, harmonious and inclusive society. May the spirit of brotherhood and compassion be furthered.
— Narendra Modi (@narendramodi) August 1, 2020