ಕಲಬುರಗಿ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ-2020ಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷ/ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಹಾಗೂ ವಾಹನಗಳ ಅನುಮತಿಗಾಗಿ ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಓರ್ವ ನೋಡಲ್ ಅಧಿಕಾರಿ ಮತ್ತು 6 ಜನ ಸದಸ್ಯರುನ್ನೊಳಗೊಂಡ ತಂಡವನ್ನು ರಚಿಸಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.
ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ-2020ಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ನಡೆಸುವ ಪ್ರಚಾರಗಳ ಸಂಬಂಧವಾಗಿ ಅನುಮತಿಗಾಗಿ ಪ್ರಸ್ತಾವನೆ ಪರಿಶೀಲಿಸಿ ಅನುಮತಿ ನೀಡಲು ಚುನಾವಣಾ ಆಯೋಗವು ನಿರ್ದೇಶನ ನೀಡಿದೆ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುವ ಚುನಾವಣಾ ಪ್ರಚಾರ ಸಭೆ-ಸಮಾರಂಭಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡಲು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಸ್ಥಾಪಿಸಲಾಗಿದೆ. ತಂಡದ ವಿವರ ಇಂತಿದೆ.
ಕಲಬುರಗಿ ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೇದಾರ ಗಂಗಾಧರ್ ಪಾಟೀಲ್ (ಮೊಬೈಲ್ ಸಂಖ್ಯೆ 9448557713) ಇವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ತಂಡದ ಸದಸ್ಯರನ್ನಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಿರಂಜನ್ ಖಂಡೆ (ಮೊಬೈಲ್ ಸಂಖ್ಯೆ 8296721651), ಗ್ರಾಮ ಲೆಕ್ಕಿಗ ಆನಂದಕುಮಾರ್ (ಮೊಬೈಲ್ ಸಂಖ್ಯೆ 9008768835), ಸಾರಿಗೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ರಿಷರ್ಡ್ಸನ್ (ಮೊಬೈಲ್ ಸಂಖ್ಯೆ 9900232566), ಸ್ಥಳೀಯ ಸಂಸ್ಥೆಯ ಶೀಘ್ರಲಿಪಿಗಾರ ಮಹ್ಮದ್ ಜಾಫರ್ (ಮೊಬೈಲ್ ಸಂಖ್ಯೆ 9945308512), ಪೊಲೀಸ್ ಇಲಾಖೆಯ ಎಎಸ್ಐ ಚಂದ್ರಕಲಾ (ಮೊಬೈಲ್ ಸಂಖ್ಯೆ 7899318100) ಹಾಗೂ ಪೊಲೀಸ್ ಕಾನ್ಸ್ಸ್ಟೇಬಲ್ ಚಂದ್ರಕಾಂತ್ ( ಮೊಬೈಲ್ ಸಂಖ್ಯೆ 8971451853) ಇವರನ್ನು ನೇಮಕ ಮಾಡಲಾಗಿದೆ.
ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಬರುವ ಅರ್ಜಿಗಳಿಗೆ ಸದಸ್ಯರು ತಮ್ಮ ಇಲಾಖೆಯ ಅನುಮತಿ ಪತ್ರ ಪಡೆದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈ ವರದಿಯನ್ನು ಆಧರಿಸಿ ಚುನಾವಣಾ ನೀತಿ ಸಂಹಿತೆ ನಿಯಮಗಳಂತೆ ರಾಜಕೀಯ ಪಕ್ಷ, ಅಭ್ಯರ್ಥಿಗಳ ಪ್ರಚಾರಕ್ಕಾಗಿ ಅನುಮತಿ ನೀಡಬೇಕೆಂದು ಅವರು ತಿಳಿಸಿದ್ದಾರೆ.