Saturday, August 13, 2022

Latest Posts

ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತದ ಚುನಾವಣೆ: ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ 3130 ಮತಗಳಿಂದ ಗೆಲುವು

ಹೊಸ ದಿಗಂತ ವರದಿ, ಕಲಬುರಗಿ:

ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಗೆಲುವು ಸಾಧಿಸಿದ್ದಾರೆ.
ವಿಜಯದ ಬಳಿಕ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿಗೆ ವಿಜಯ ಮಾಲೆ ತೊಡಿಸಿದ ಶಿಕ್ಷಕರು,ಹಾಗೂ ಕಾಯ೯ಕತ೯ರು ಸಂಭ್ರಮಾಚರಣೆ ಮಾಡಿದರು.
ಎರಡನೆ ಪ್ರಾಶಸ್ತ್ಯದ ಮತ ಎಣಿಕೆ ನಂತ್ರ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ವಿರುದ್ದ ………… ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಪಡೆದ ಮತಗಳು 10212 ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳು 7082 ಆಗಿವೆ. ಈ ಗೆಲುವಿಗೆ ಬಿಎಸ್ ವೈ ನೇತೃತ್ವದ ನಮ್ಮ ಸರ್ಕಾರದ ಕೆಲಸ ಕಾರಣ ಎಂದು ಹೇಳಿದರು. ಶಿಕ್ಷಕರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಶಿಕ್ಷಕರಿಗೆ ನಾನು ಚಿರರುಣಿ ಆಗಿದ್ದಾನೆ ಎಂದರು. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಗೆಲುವು ಸಮಪ೯ಣೆ ಮಾಡುವೆ ಎಂದ ನಮೋಶಿ, ಶಿಕ್ಷಕರ ಪರವಾಗಿ ನಿಂತು ನಾನು ಕೆಲಸ ಮಾಡಲು ಸಿದ್ದನಿದ್ದೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss