Sunday, August 14, 2022

Latest Posts

ಈಶಾನ್ಯ ಲಡಾಖ್ ಸೆಕ್ಟರ್ ನಿಂದ ಮೂರು ಹಂತಗಳಲ್ಲಿ ಸೇನಾ ಪಡೆಗಳ ಹಿಂತೆಗೆತಕ್ಕೆ ಭಾರತ-ಚೀನಾ ಒಪ್ಪಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ-ಚೀನಾ ಗಡಿಯಲ್ಲಿ ಮತ್ತೆ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈಶಾನ್ಯ ಲಡಾಖ್ ಸೆಕ್ಟರ್ ನಿಂದ ಮೂರು ಹಂತಗಳಲ್ಲಿ ವಾಪಸ್ ಸೇನಾ ಪಡೆಗಳ ಹಿಂತೆಗೆಯುವಿಕೆಗೆ ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ.
ಚುಶುಲ್ ನಲ್ಲಿ ನಡೆದ 8 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮೂರು ಹಂತಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಪ್ರಕ್ರಿಯೆ ನಡೆಯಲಿದ್ದು, ಮಾತುಕತೆ ನಡೆದ ಒಂದು ವಾರಗಳ ಅವಧಿಯಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಉಭಯ ಪಡೆಗಳು ಎಲ್‌ಎಸಿಯಿಂದ ಮುಂದೆ ಬಂದಿದ್ದ ಪ್ರದೇಶಗಳಿಂದ ಶಸ್ತ್ರಸಜ್ಜಿತ ಸಿಬ್ಬಂದಿಗಳು, ಟ್ಯಾಂಕ್ ಗಳು, ಶಸ್ತ್ರಸಜ್ಜಿತ ವಾಹನಗಳೊಂದಿಗೆ ಹಿಂತಿರುಗಲು ಭಾರತ- ಪರಸ್ಪರ ನಿರ್ಧರಿಸಿದೆ .
ಸಭೆಯಲ್ಲಿ ರೂಪಿಸಲಾದ ಯೋಜನೆಯ ಪ್ರಕಾರ, ಟ್ಯಾಂಕ್ ಗಳು, ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಒಂದು ದಿನದಲ್ಲಿ ವಾಪಸ್ ತೆರಳಬೇಕಿದೆ.
2 ನೇ ಹಂತದಲ್ಲಿ ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಉಭಯ ಸೇನೆಗಳು ದಿನವೊಂದಕ್ಕೆ ಶೇ.30 ರಷ್ಟು ಸಿಬ್ಬಂದಿಗಳಂತೆ ಒಟ್ಟು ಮೂರು ದಿನಗಳ ಕಾಲ ವಾಪಸ್ ಕರೆಸಿಕೊಳ್ಳಲಿವೆ. ಈ ವೇಳೆ ಭಾರತೀಯ ಪಡೆಗಳು ಧನ್ ಸಿಂಗ್ ಥಾಪ ಪೋಸ್ಟ್ ಗೆ ವಾಪಸ್ಸಾಗಲಿವೆ. ಚೀನಾದ ಪಡೆ ಫಿಂಗರ್ 8 ಕ್ಕೆ ಪೂರ್ವದ ತಮ್ಮ ಹಿಂದಿನ ಸ್ಥಿತಿಗೆ ಮರಳಲಿದ್ದಾರೆ.
ಮೂರನೇ ಹಾಗೂ ಕೊನೆಯ ಪ್ರಕ್ರಿಯೆಯಲ್ಲಿ ಉಭಯ ಪಡೆಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ಮುಂದಿನಿಂದ ತಮ್ಮ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿದ್ದಾರೆ. ಈ ಪೈಕಿ ಚುಶುಲ್ ಹಾಗೂ ರೆಝಾಂಗ್ ಲಾ ಪ್ರದೇಶವೂ ಸೇರ್ಪಡೆಗೊಳ್ಳಲಿವೆ.
ಸೇನಾ ಪಡೆಗಳ ಹಿಂತೆಗೆತದ ಪ್ರಕ್ರಿಯೆಗಳ ಮೇಲೆ ಸೂಕ್ಷ್ಮವಾಗಿ ನಿಗಾವಹಿಸಲು ಉಭಯ ರಾಷ್ಟ್ರಗಳೂ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ನಿಯೋಗ ಸಭೆಗಳನ್ನು ಹಾಗೂ ಮಾನವ ರಹಿತ ವೈಮಾನಿಕ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ನಿರ್ಧರಿಸಿದ್ದಾರೆ.
ಆದರೆ ಭಾರತವು ಚೀನಾದ ಮೇಲೆ ಪೂರ್ಣ ಪ್ರಮಾಣದಲ್ಲಿ ವಿಶ್ವಾಸ ಇಡುವುದು ಅಸಾಧ್ಯ. ಈ ಹಿನ್ನೆಲೆ ಈ ಬಾರಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.
8 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಹಾಗೂ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ ಬ್ರಿಗೇಡಿಯ ಘಾಯ್ ಉಪಸ್ಥಿತರಿದ್ದರು,

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss