ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತಾ ಆದೇಶದ ಬಳಿಕವೂ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲದ ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕೂಡ ಸಿದ್ದರಾಗುತ್ತಿರುವ ಡೊನಾಲ್ಡ್ ಟ್ರಂಪ್ಗೆ ಪತ್ನಿ ಬುದ್ದಿಮಾತು ಹೇಳಿದ್ದಾರೆ.
ಜೊ ಬೈಡನ್ ವಿರುದ್ಧ ಸುಮ್ಮನೆ ಸೋಲು ಒಪ್ಪಿಕೊಳ್ಳಿ. ಮುಂದೆ ಯಾವುದೇ ಕಾನೂನು ಹೋರಾಟಕ್ಕೆ ಇಳಿಯುವುದು ಬೇಡ ಎಂದು ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಸಲಹೆ ನೀಡಿದ್ದಾರೆಂದು ಸಿಎನ್ಎನ್ ಸುದ್ದಿವಾಹಿನಿ ವರದಿ ಮಾಡಿದೆ.
ತಮ್ಮ ಪತಿಯ ಪರವಾಗಿ ಮೆಲಾನಿಯಾ ಟ್ರಂಪ್ ಬಿರುಸಿನ ಪ್ರಚಾರ ನಡೆಸಿದ್ದರು. ಆ ಬಳಿಕ ಮೊನ್ನೆ ನ.3ರಂದು ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದಿದ್ದರು. ನಂತರ ಅವರು ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಮತ್ತು ಹೇಳಿಕೆಯನ್ನೂ ನೀಡಿಲ್ಲ. ಆದರೆ ಖಾಸಗಿಯಾಗಿ ತಮ್ಮ ಪತಿಗೆ ಸೋಲು ಒಪ್ಪಿಕೊಳ್ಳುವಂತೆ, ಮುಂದೆ ಯಾವುದೇ ಕಾನೂನು ಹೋರಾಟಕ್ಕೆ ಇಳಿಯುವುದು ಬೇಡ ಎಂದು ಸಲಹೆ ಅಭಿಪ್ರಾಯ ನೀಡಿದ್ದಾರೆಂದು ಸುದ್ದಿವಾಹಿನಿ ವರದಿ ಮಾಡಿದೆ.